'ಓಂ ಜಪಿಸುವ ಸೂರ್ಯ': ನಕಲಿ ವಿಡಿಯೋ ಶೇರ್ ಮಾಡಿ ನಗೆಪಾಟಲಿಗೀಡಾದ ಕಿರಣ್ ಬೇಡಿ
ಹೊಸದಿಲ್ಲಿ: ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಟ್ವಿಟರ್ ನಲ್ಲಿ ನಕಲಿ ವಿಡಿಯೋವೊಂದನ್ನು ಶೇರ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ.
ಕಿರಣ್ ಬೇಡಿ ಶೇರ್ ಮಾಡಿದ ವೀಡಿಯೋಗೆ ಯಾವುದೇ ಶೀರ್ಷಿಕೆ ನೀಡಿಲ್ಲವಾದರೂ ಆ ವೀಡಿಯೋದಲ್ಲಿ ಕಾಣಿಸುವ ಟೆಕ್ಸ್ಟ್ ಜನರು ನಗುವಂತೆ ಮಾಡಿದೆ. ಹಲವು ಚಿತ್ರಗಳ ಕೊಲಾಜ್ ಆಗಿರುವ ಈ ವೀಡಿಯೋದಲ್ಲಿ ಹಿನ್ನೆಲೆ ಧ್ವನಿಯೂ ಇದೆ, ಜತೆಗೆ ವೀಡಿಯೋದಲ್ಲಿನ ಟೆಕ್ಸ್ಟ್ನಲ್ಲಿ `ಸೂರ್ಯನ ದನಿಯನ್ನು ನಾಸಾ ದಾಖಲಿಸಿಕೊಂಡಿದೆ'' ``ಸೂರ್ಯ ಓಂ ಜಪಿಸುತ್ತಾನೆ,'' ಎಂದು ಬರೆಯಲಾಗಿದೆ.
ಈ ವೀಡಿಯೋಗೆ 19,000ಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದು, 6,200 ಮಂದಿ ರಿಟ್ವೀಟ್ ಮಾಡಿದ್ದಾರೆ. ಹಲವರು ಈ ವೀಡಿಯೋ ನಕಲಿ ಎಂಬುದನ್ನೂ ಬೊಟ್ಟು ಮಾಡಿ ತೋರಿಸಿದ್ದರೆ ಕೆಲವರು ಸ್ವಾರಸ್ಯಕರವಾಗಿ ವ್ಯಂಗ್ಯವಾಡಿದ್ದಾರೆ.
ವಾಸ್ತವವಾಗಿ 2018ರಲ್ಲಿ ಸೂರ್ಯನ ಕಡಿಮೆ ತರಂಗಾಂತರದ ಸದ್ದುಗಳ ವೀಡಿಯೋವನ್ನು ಯೂಟ್ಯೂಬ್ ಹಾಗೂ ಟ್ವಿಟರ್ ನಲ್ಲಿ ನಾಸಾ ಶೇರ್ ಮಾಡಿತ್ತು. ``ಸೂರ್ಯ ಮೌನವಾಗಿಲ್ಲ. ನಮ್ಮ ತಾರೆಯ ಹೃದಯ ಬಡಿತದ ಸಣ್ಣಗಿನ ಸದ್ದಿನಿಂದ ವಿಜ್ಞಾನಿಗಳಿಗೆ ಒಳಗೇನಿದೆ ಎಂದು ತಿಳಿಯಲು ಸಾಧ್ಯವಾಗಿದೆ, ನೋಡಲು ಸಾಧ್ಯವಾಗದ್ದನ್ನು ಅಧ್ಯಯನ ನಡೆಸಲು ಇದು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ'' ಎಂದು ನಾಸಾ ಆಗ ಟ್ವೀಟ್ ಮಾಡಿದ್ದು, ಸೂರ್ಯನ ಧ್ವನಿಯ ಆಡಿಯೋ ಕೂಡ ಅದರಲ್ಲಿತ್ತು.
— Kiran Bedi (@thekiranbedi) January 4, 2020
Mam this one is real pic.twitter.com/RzWNYhvRBM
— Tempest (@ColdCigar) January 4, 2020
Once upon a time this lady was a hero to many. What a disgrace now!
— Syed Usman (@Sydusm) January 4, 2020
The Sun is not silent. The low, pulsing hum of our star's heartbeat allows scientists to peer inside, revealing huge rivers of solar material flowing, along with waves, loops and eruptions. This helps scientists study what can’t be seen. Listen in: https://t.co/J4ZC3hUwtL pic.twitter.com/lw30NIEob2
— NASA (@NASA) July 25, 2018