ನಿಗದಿತ ಸಮಯದಲ್ಲಿ ಚಿತ್ರ ಆರಂಭಿಸದ ಪಿವಿಆರ್ ವಿರುದ್ಧ ಪ್ರಕರಣ ದಾಖಲು
ಮುಂಬೈ, ಜ. 4: ‘ಜುಮಾಂಜಿ: ದಿ ನೆಕ್ಸ್ಟ್ ಲೆವೆಲ್’ ಇಂಗ್ಲಿಷ್ ಸಿನೆಮಾ ವನ್ನು ಸಮಯಕ್ಕೆ ಸರಿಯಾಗ ಆರಂಭಿಸದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮಾಧೇಪುರದ ಇನ್‌ಆರ್ಬಿಟ್‌ನಲ್ಲಿರುವ ಪಿವಿಆರ್ ಸಿನೆಮಾದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಿನೆಮಾ 12 ನಿಮಿಷಗಳ ಕಾಲ ತಡವಾಗಿ ಆರಂಭವಾಗಿತ್ತು. ಭ್ರಷ್ಟಾಚಾರ ವಿರೋಧಿ ವೇದಿಕೆ (ಎಫ್‌ಎಸಿ) ಪಿವಿಆರ್ ಸಿನೆಮಾಸ್ ವಿರುದ್ಧ ತೆಲಂಗಾಣ ಸಿನೆಮಾ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಮಾಧೇಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ‘‘ಟಿಕೆಟ್‌ನಲ್ಲಿ ನಿಗದಿಪಡಿಸಲಾದ ಪ್ರದರ್ಶನ ಸಮಯಕ್ಕಿಂತ 12 ನಿಮಿಷಗಳು ತಡವಾಗಿ ಪಿವಿಆರ್ ಸಿನೆಮಾ ಪ್ರದರ್ಶಿಸಿದೆ.
ಜಾಹೀರಾತು ಪ್ರದರ್ಶಿಸುವ ಮೂಲಕ ಸಿನೆಮಾ ವೀಕ್ಷಕರ ಸಮಯ ಹಾಳು ಮಾಡಿದೆ. ಇದು ತೆಲಂಗಾಣ ಸಿನೆಮಾ ನಿಯಂತ್ರಣ ಕಾಯ್ದೆಯ ಉಲ್ಲಂಘನೆ’’ ಎಂದು ಎಫ್‌ಎಸಿಯ ಕೆ. ಸಾಯಿ ತೇಜಾ ಹೇಳಿದ್ದಾರೆ.
Next Story







