ರಣಜಿ: ಮುಂಬೈ ಮಣಿಸಿದ ಕರ್ನಾಟಕ

ಮುಂಬೈ, ಜ.5: ಪ್ರತೀಕ್ ಜೈನ್ ಸ್ಪಿನ್ ಮೋಡಿ ಹಾಗೂ ದೇವದತ್ತ ಪಡಿಕ್ಕಲ್ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆತಿಥೇಯ ಮುಂಬೈ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ.
ಇಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯ ಗೆಲ್ಲಲು 126 ರನ್ ಗುರಿ ಪಡೆದ ಕರ್ನಾಟಕ 24.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ದೇವದತ್ತ ಪಡಿಕ್ಕಲ್(50) ಹಾಗೂ ಆರ್.ಸಮರ್ಥ್(34) ಮೊದಲ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ದೇವದತ್ತ ಅರ್ಧಶತಕ(50)ಹಾಗೂ ರೋಹನ್ ಕದಂ(21) ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.
ಕರ್ನಾಟಕ ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ 2ನೇ ಗೆಲುವು ದಾಖಲಿಸಿತು. ಕರ್ನಾಟಕ ಒಟ್ಟು 16 ಅಂಕ ಗಳಿಸಿದೆ. ಜ.11ರಿಂದ ಸೌರಾಷ್ಟ್ರದ ವಿರುದ್ದ ಐದನೇ ಸುತ್ತಿನ ಪಂದ್ಯವನ್ನು ಆಡಲಿದೆ.
ಇದಕ್ಕೂ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 109 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಮುಂಬೈ 50 ಓವರ್‌ಗಳಲ್ಲಿ 149 ರನ್‌ಗೆ ಆಲೌಟಾಯಿತು. ಸರ್ಫರಾಝ್ ಖಾನ್ ಸರ್ವಾಧಿಕ ಸ್ಕೋರ್(ಔಟಾಗದೆ 71)ಗಳಿಸಿದ್ದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಪ್ರತೀಕ್ ಜೈನ್ 3ನೇ ದಿನವಾದ ರವಿವಾರ 11 ರನ್‌ಗೆ 4 ವಿಕೆಟ್‌ಗಳನ್ನು ಪಡೆದು ಮಿಂಚಿದರು. ್.







