ಬಡಕಬೈಲು: ಶಾಸಕರಿಂದ ಆಟೋರಿಕ್ಷಾ ನಿಲ್ದಾಣ ಲೋಕಾರ್ಪಣೆ

ಬಂಟ್ವಾಳ, ಜ. 5: ಬಡಕಬೈಲುವಿನಲ್ಲಿ ಶಾಸಕರ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡ ಆಟೋರಿಕ್ಷಾ ನಿಲ್ದಾಣವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ರವಿವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಸೇವೆಯಲ್ಲಿರುವ ರಿಕ್ಷಾ ಚಾಲಕ-ಮಾಲಕರು ಇತ್ತೀಚೆಗಿನ ದಿನಗಳಲ್ಲಿ ಸಮಾಜದಲ್ಲಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಜನರೊಂದಿಗೆ ಅನ್ಯೋನ್ಯತೆಯೊಂದಿಗಿರುವುದು ತುಂಬಾ ಸಂತಸದ ವಿಚಾರ. ಈ ನಿಟ್ಟಿನಲ್ಲಿ ಈ ಭಾಗದ ರಿಕ್ಷಾ ಚಾಲಕರ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಪ್ರೇರಣೆ ಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವೋದಯ ರಿಕ್ಷಾ ಚಾಲಕರ ಸಂಘದಿಂದ ಶಾಸಕರನ್ನು ಸನ್ಮಾನಿಸಲಾಯಿತು. ಅಟೋರಿಕ್ಷಾ ಚಾಲಕರಾದ ಶೇಖರ್, ನವಾಝ್, ಕರಿಯಂಗಳ ಪಂಚಾಯತ್ ಅಧ್ಯಕ್ಷ ಚಂದ್ರಾವತಿ, ತಾಪಂ ಯಶವಂತ್, ಪಂ ಸದಸ್ಯ ಲೋಕೇಶ್ ಭರಣಿ, ಸುರೇಶ್ ಮಣಿಕಂಠಪುರ, ಶಕುಂತಳಾ, ಪ್ರಮುಖರಾದ ಸಂಕಪ್ಪ, ಸುಕೇಶ್ ಚೌಟ, ಗೋಪಾಲ್ ಬಂಗೇರಾ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಕಿರಣ್,ಜಯಂತ್ ಮಣಿಕಂಠಪುರ, ಕಾರ್ತಿಕ್ ಬಳ್ಳಾಲ್,ಪುಷ್ಪರಾಜ್, ವಿಶ್ವನಾಥ್, ಬಶೀರ್, ಸುರದಾಸ್, ಶೇಖ್ ಮೋನು, ಗಣಪ ಪೂಜಾರಿ, ಲಿಂಗಪ್ಪ ಮುಖಾರಿ, ಚರಣ್, ಅಶೋಕ್ ಬಡಕಬೈಲು, ನಾರಾಯಣ್ ಬಡಕಬೈಲು, ಪ್ರಣಾಮ್ ಶೆಟ್ಟಿ, ಸಂದೀಪ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
.jpg)







