ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ, ಜ.5: ಕೇವಲ ತಮ್ಮ ಸ್ವಾರ್ಥವನ್ನು ಕಾಣದೆ ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಉಡುಪಿಯ ಸೈಂಟ್ ಸಿಸಿಲಿಸ್ ಶಾಲಾ ಮೈದಾನಲ್ಲಿ ರವಿವಾರ ಆಯೋಜಿಸಲಾದ ಕೊಂಕಣಿ ಗಾಯಕ ಮೆಲ್ವಿನ್ ಪೆರಿಸ್ ಮತ್ತು ಬಳಗದವ ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಉಡುಪಿ ವಲಯ ವ್ಯಾಪ್ತಿಯಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ, ಮಾರಕ ಕಾಯಿಲೆ ಗಳಿಂದ ಬಳಲುತ್ತಿರುವ ರೋಗಿಗಳಿಗೆ, ವಸತಿಯ ಆಗತ್ಯ ಹೊಂದಿರುವರಿಗೆ, ಉನ್ನತ ವಿದ್ಯಾಭ್ಯಾಸ ಮುಂದವರಿಸಲು ಅಪೇಕ್ಷಿಸುವವರಿಗೆ, ಸ್ವ-ಉದ್ಯೋಗ ಮಾಡಲು ಇಚ್ಛಿಸುವ ಕ್ರೈಸ್ತ, ಹಿಂದೂ, ಮುಸ್ಲಿಂ ಕುಟುಂಬದ 20 ಅರ್ಹ ಫಲಾನುಭವಿಗಳಿಗೆ 6.20 ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.
ಇದೇ ವೇಳೆ ಉಡುಪಿ ವಲಯದ ಕ್ರೈಸ್ತ ಉದ್ಯಮಿಗಳ ಟೆಲಿಫೋನ್ ಡೈರಕ್ಟರಿ ಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ ಅನಾವರಣಗೊಳಿಸಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಸಂತ ಸಿಸಿಲಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಿಭಾ, ಉಡುಪಿ ವಲಯದ ಮಾರ್ಗ ದರ್ಶಕ ಅಲ್ಫೋನ್ಸ್ ಡಿಕೋಸ್ತಾ, ಘಟಕಗಳ ಅಧ್ಯಕ್ಷರುಗಳಾದ ಬ್ರಾಯನ್ ಕೊರೆಯಾ, ಸಂಜಯ್ ಅಂದ್ರಾದೆ, ಲೋರೆನ್ಸ್ ಡೆಸಾ, ರಫಾಯೆಲ್ ಡಿಸೋಜ, ವಲೇರಿಯನ್ ಮಥಾಯ್ಸ್, ಅನಿಲ್ ಡಿಸೋಜ, ಬ್ರಿಜಿತ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಉಡುಪಿ ವಲಯ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿ ದರು. ಕಾರ್ಯದರ್ಶಿ ಲವೀನಾ ಪಿರೇರಾ ವಂದಿಸಿ ದರು. ಲೆಸ್ಲಿ ಅರೋಜಾ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು.







