ಸೂಡ, ಪುನಾರು, ಬೆಳ್ಮಣ್ ಆರ್‌ಎಸ್‌ಬಿ ಸಂಘದಿಂದ ಪ್ರತಿಭಾ ಪುರಸ್ಕಾರ

ಶಿರ್ವ, ಜ.5: ಸೂಡ, ಪುನಾರು ಬೆಳ್ಮಣ್ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ ಕೂಡುಕಟ್ಟಿನ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರಿಗೆ ಗೌರವಿಸುವ ಕಾರ್ಯಕ್ರಮವನ್ನು ರವಿವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಸೂಡ, ಪುನಾರು,ಬೆಳ್ಮಣ್ ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಪುನಾರು ರಂಜಿತ್ ಕೆ.ಎಸ್. ವಹಿಸಿದ್ದರು. ಈ ಸಂದರ್ಭ ದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಮೀಕ್ಷಾ ನಾಯಕ್, ರಚನಾ, ಆಶಾ, ಅಶ್ವಿನಿ, ಶ್ರೇಯಾ, ಅಮೃತಾ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತೆ ವಿಜೇತಾರವರನ್ನು ಗೌರವಿಸಲಾಯಿತು.
ಕಾಪು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ರಾಜಾಪುರ ಸಾರಸ್ವತ ಯುವ ವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ಶ್ರೀದುರ್ಗಾ ಚಂಡೆಬಳಗದ ಅಧ್ಯಕ್ಷೆ ಗೀತಾ ವಾಗ್ಲೆ, ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ದೇವೇಂದ್ರ ನಾಯಕ್, ಶೋಭಾ ಪಿ.ಪ್ರಭು ಪುನಾರು ಮುಖ್ಯ ಅತಿಥಿ ಗಳಾಗಿದ್ದರು.
ಸಂಘದ ಉಪಾಧ್ಯಕ್ಷ ಗಣಪತಿ ನಾಯಕ್ ಪುನಾರು, ಕೋಶಾಧಿಕಾರಿ ನರಸಿಂಹ ಪ್ರಭು ಸೂಡ, ಸಂಘಟನಾ ಕಾರ್ಯದರ್ಶಿ ದೇವೇಂದ್ರ ನಾಯಕ್ ಪುನಾರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಂಜಿತ್ ಕೆ.ಎಸ್. ಸ್ವಾಗತಿಸಿದರು. ಕಾರ್ಯರ್ಶಿ ವಿಶ್ವನಾಥ್ ಪಾಟ್ಕರ್ ವಂದಿಸಿದರು.







