‘ಪಂಜುರ್ಲಿ ಇದ್ದಾನೆ’ -‘ದೂರಾಗೊ ಮುನ್ನ’ ಕೃತಿ ಬಿಡುಗಡೆ

ಉಡುಪಿ, ಜ.5: ಸಾಹಿತ್ಯಗಳನ್ನು ಓದುವುದರಿಂದ ದಿನ ನಿತ್ಯದ ಜಂಜಾಟ ದಿಂದ ಹೊರಬರಲು ಸಹಕಾರಿಯಾಗುತ್ತದೆ ಎಂದು ಲೇಖಕಿ ಜ್ಯೋತಿ ಮಹಾ ದೇವ್ ಹೇಳಿದ್ದಾರೆ.
ಹಿರಿಯಡ್ಕ ಅದ್ರಿ ಪ್ರಕಾಶನದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ರವಿವಾರ ನಡೆದ ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಹಾಗೂ ‘ದೂರಾಗೊ ಮುನ್ನ’ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ತಾನು ಕಂಡುಕೊಂಡ ವಿಚಾರಗಳನ್ನು ಇತರರಿಗೆ ಹೇಳಬೇಕೆಂಬ ತುಡಿತ ಮಾತು ಹುಟ್ಟುವ ಮೊದಲೇ ಮಾನವನಲ್ಲಿ ಇತ್ತು. ಬರವಣಿಗೆ ಬೆಳೆದಂತೆ ಸಾಹಿತ್ಯ ಮುದ್ರಿತ ರೂಪವನ್ನು ಪಡೆದುಕೊಂಡಿತು. 21ನೆ ಶತಮಾನದಲ್ಲಿ ಮುದ್ರಿತ ರೂಪಗಳನ್ನು ದಾಟಿ ಅಂತರ್ಜಾಲ ಸಾಹಿತ್ಯ ಬೆಳೆದು ನಿಂತಿದೆ ಎಂದರು.
ಅಂತರ್ಜಾಲ ವ್ಯಾಪಕವಾಗಿ ಬೆಳೆದಿರುವ ಇಂದಿನ ದಿನಗಳಲ್ಲಿಯೂ ವರ್ಷಕ್ಕೆ 5 ರಿಂದ 6 ಸಾವಿರ ಸಾಹಿತ್ಯ ಕೃತಿಗಳು ಮುದ್ರಣ ಗೊಳ್ಳುತ್ತಿದೆ. ಆದರೆ ಸಾಹಿತ್ಯ ಕೃತಿಗಳ ಮಯದ್ರಣ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳ ಬೇಕಾಗಿದೆ ಎಂದು ಅವರು ತಿಳಿಸಿದರು.
ಯುವ ತಲೆಮಾರಿನ ಲೇಖಕರು ಹಿಂದಿನ ಸಾಹಿತ್ಯಗಳನ್ನು ಅಧ್ಯಯನ ಮಾಡುವುದರಿಂದ ತಮ್ಮ ಕೃತಿಗಳಿಗೆ ಅಗತ್ಯವಾದ, ಪರಿಣತಿ ಹಾಗೂ ಭಾವನಾ ಸಂವಹನದ ಶಕ್ತಿ ತುಂಬಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಪ್ರೊ.ಮುರಳಿಧರ ಉಪಾದ್ಯ ವಹಿಸಿ ದ್ದರು. ಉಡುಪಿ ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಧ್ಯಾಪಕ ಸೋಜನ್ ಕೆ. ಜಾರ್ಜ್, ಲೇಖಕಿ ಚಂದ್ರಿಕಾ ನಾಗರಾಜ್, ಪ್ರಕಾಶಕ ಕೆ.ನಾಗರಾಜ್ ಶೆಟ್ಟಿ, ಪ್ರೇಮ ಎನ್.ಶೆಟ್ಟಿ, ನಿಖಿತಾ ಕೃಷ್ಣ ಉಪಸ್ಥಿತರಿದ್ದರು. ಸುದರ್ಶನ್ ಶೆಟ್ಟಿ ಸ್ವಾಗತಿಸಿ ದರು. ತಿಲಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ವಂದಿಸಿದರು.







