ಅಪಘಾತ: ಅಂಗಡಿಗಳಿಗೆ ನುಗ್ಗಿದ ಲಾರಿ

ಬೈಂದೂರು, ಜ.5: ಮರಳು ಸಾಗಿಸುತ್ತಿದ್ದ ಲಾರಿಯೊಂದು ಮಿನಿ ಟಿಪ್ಪರ್‌ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಜಖಂಗೊಳಿಸಿರುವ ಘಟನೆ ಬೈಂದೂರು ಹೊಸ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಬೆಳಗ್ಗೆ 9.45ರ ಸುಮಾರಿಗೆ ನಡೆದಿದೆ.
ಮಂಗಳೂರು ಕಡೆಯಿಂದ ಭಟ್ಕಳದ ಕಡೆಗೆ ಹೋಗುತ್ತಿದ್ದ ಮರಳು ಸಾಗಿಸುತ್ತಿದ್ದ ಲಾರಿ ಹಾಗೂ ಅದೇ ಸಮಯಕ್ಕೆ ಯೋಜನಾ ನಗರ ಕಡೆಯಿಂದ ಬರುತ್ತಿದ್ದ ಮಿನಿ ಟಿಪ್ಪರ್ ಪರಸ್ಪರ ಢಿಕ್ಕಿ ಹೊಡೆಯಿತು. ಇದರಿಂದ ನಿಯಂತ್ರಣ ತಪ್ಪಿದ ಲಾರಿಯು ಪಕ್ಕದಲ್ಲಿದ್ದ 2 ಅಂಗಡಿಗೆ ನುಗ್ಗಿತ್ತೆನ್ನಲಾಗಿದೆ.
ಇದರಿಂದ ಎರಡು ಅಂಗಡಿಗಳು ಜಖಂಗೊಂಡಿದ್ದು ಯಾರಿಗೂ ಗಾಯ ಗಳಾಗಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





