ಮಂಗಳೂರು: ‘ಶಾಪ್ ಆ್ಯಂಡ್ ವಿನ್’ ವಿಕೆ ಉತ್ಸವ ಲಕ್ಕಿ ಡ್ರಾ

ಮಂಗಳೂರು, ಜ.5: ಯೆಯ್ಯಡಿ ಏರ್‌ಪೋರ್ಟ್ ರಸ್ತೆಯಲ್ಲಿರುವ ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್‌ನಲ್ಲಿ ಗ್ರಾಹಕರಿಗೆ ದಸರಾ ದಿಂದ ವರ್ಷಾಂತ್ಯ ತನಕ ಆಯೋಜಿಸಿದ್ದ ಶಾಪ್ ಆ್ಯಪ್ ವಿನ್ ಯೋಜನೆಯ ವಿಕೆ ಉತ್ಸವ್ 2020 ಲಕ್ಕಿ ಡ್ರಾ ಕಾರ್ಯಕ್ರಮವು ವಿಕೆ ಶೋರೂಮ್‌ನಲ್ಲಿ ರವಿವಾರ ನಡೆಯಿತು.
ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ಮಹಾಪ್ರಬಂಧಕ ಯೋಗೀಶ್ ಆಚಾರ್ಯ ಬಂಪರ್ ಬಹುಮಾನದ ಲಕ್ಕಿ ಡ್ರಾ ನೆರವೇರಿಸಿ, ವಿಕೆ ಫರ್ನಿಚರ್‌ಗೆ ಕೆನರಾ ಬ್ಯಾಂಕ್ ಆರ್ಥಿಕ ನೆರವು ನೀಡುತ್ತಿರುವುದು ಹೆಮ್ಮೆಯ ವಿಚಾರ. ಗುಣಮಟ್ಟ, ಆಕರ್ಷಕ ದರ, ಅತ್ಯುತ್ತಮ ನಗುಮುಖದ ತ್ವರಿತ ಸೇವೆ ಮೂಲಕ ಮಳಿಗೆ ಕಡಿಮೆ ಅವಧಿಯಲ್ಲಿ ಉತ್ತಮ ಯಶಸ್ಸು ಕಂಡಿದೆ. ಶೀಘ್ರ ತೊಕ್ಕೊಟ್ಟಿ ನಲ್ಲಿ ಶಾಖೆ ತೆರೆಯಲಿದ್ದು, ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಕೆನರಾ ಬ್ಯಾಂಕಿನ ಗಾಂಧಿನಗರದ ಶಾಖೆಯ ಮುಖ್ಯ ಪ್ರಬಂಧಕ ರಾಜೇಶ್ ಪೈ, ಜೈನ್ ಟ್ರಾವೆಲ್ಸ್‌ನ ಮಾಲಕ ರತ್ನಾಕರ ಜೈನ್, ದಾಯ್ಜಿ ವರ್ಲ್ಡ್‌ನ ಆಡಳಿತ ನಿರ್ದೇಶಕ ಅಲೆಕ್ಸ್ ಕ್ಯಾಸ್ತಲಿನೊ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎ.ಎಸ್.ಭಟ್, ಲೋಬೊ ಚೇಂಬರ್ಸ್‌ನ ಪಾಲುದಾರ ಮೋಹನ್ ಬಾಳಿಗಾ, ಕರಾವಳಿ ಮಾರ್ಕೆಟಿಂಗ್‌ನ ಶಿವಾನಂದ ಲಕ್ಕಿ ಡ್ರಾಗಳನ್ನು ನೆರವೇರಿಸಿ, ಶುಭ ಹಾರೈಸಿದರು.
ವಿಕೆ ರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್‌ನ ಮಾಲಕ ವಿಠಲ್ ಕುಲಾಲ್ ಕೊಣಾಜೆ ಕೃತಜ್ಞತೆ ಸಲ್ಲಿಸಿದರು. ಚೇತನ್ ಪಿಲಿಕುಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು: ಲಕ್ಕಿ ಡ್ರಾದಲ್ಲಿ ಪ್ರಥಮ ಬಂಪರ್ ಬಹುಮಾನ (ಸುಝುಕಿ ವ್ಯಾಗನ್‌ಆರ್ ಕಾರ್)- ನಾರಾಯಣ್ ಪೈ, ದ್ವಿತೀಯ (ಸುಝುಕಿ ಆ್ಯಕ್ಸೆಸ್ 125 ಸಿಸಿ ಬೈಕ್)- ಪವನ್, ತೃತೀಯ- ನಳಿನಿ, ನಾಲ್ಕನೇ- ಕಿಶೋರ್ ಶೆಟ್ಟಿ, 5ನೇ- ಸುಪ್ರಿಯಾ ಸುವರ್ಣ, 6ನೇ- ಶೋಭಾ ಶೆಟ್ಟಿ, ಏಳನೇ- ಸಂಧ್ಯಾ, ಎಂಟನೇ- ಹ್ಯಾಂಡ್ರಿ, ಒಂಬತ್ತನೇ ಬಹುಮಾನವನ್ನು ಶೇಕ್ ಅವರು ವಿಜೇತರಾದರು.







