ಆಕಾಶವನ್ನು ಕಿತ್ತಳೆ ಬಣ್ಣಕ್ಕೆ ತಿರುಗಿಸಿದ ಬೆಂಕಿ
ಮೆಲ್ಬರ್ನ್, ಜ. 5: ಆಸ್ಟ್ರೇಲಿಯದಲ್ಲಿ ಕಾಡ್ಗಿಚ್ಚಿನಿಂದಾಗಿ ಹೊರಹೊಮ್ಮಿರುವ ಹೊಗೆಯು ರವಿವಾರ ನೆರೆಯ ದೇಶ ನ್ಯೂಝಿಲ್ಯಾಂಡ್‌ನ ಹಲವು ಭಾಗಗಳನ್ನು ಆವರಿಸಿದೆ ಹಾಗೂ ಆಕ್ಲಂಡ್ ನಗರದ ಆಕಾಶವನ್ನು ಕಿತ್ತಳೆ ಬಣ್ಣಕ್ಕೆ ತಿರುಗಿಸಿದೆ.
ಆಕ್ಲಂಡ್ ನಗರವು ತಿಂಗಳುಗಳಿಂದ ಕಾಡ್ಗಿಚ್ಚಿನ ದಾಳಿಗೆ ತುತ್ತಾಗಿರುವ ಆಗ್ನೇಯ ಆಸ್ಟ್ರೇಲಿಯದಿಂದ ಸುಮಾರು 2,000 ಕಿ.ಮೀ. ದೂರದಲ್ಲಿದೆ.
‘‘ನಾವು ಆಕ್ಲಂಡ್‌ನಲ್ಲಿದ್ದೇವೆ. ಇಷ್ಟು ದೂರದಲ್ಲಿದ್ದರೂ ಹೊಗೆ ಇಷ್ಟೊಂದು ದಟ್ಟವಾಗಿದೆ’’ ಎಂದು ನಿವಾಸಿಯೊಬ್ಬರು ಹೇಳಿದರು.
Next Story





