ಜ.9-11: ಎ.ಜೆ. ಆಸ್ಪತ್ರೆಯಲ್ಲಿ ಎಂಡೋಕ್ರಿನೊಲೊಜಿ ತಪಾಸಣಾ ಶಿಬಿರ
ಮಂಗಳೂರು, ಜ.6: ಎ.ಜೆ ಆಸ್ಪತ್ರೆಯು ಜ.9ರಿಂದ 11ರವರೆಗೆ ಹಾರ್ಮೋನ್ ಸಂಬಂಧಿತ ರೋಗಗಳ (ಎಂಡೋಕ್ರಿನೊಲೊಜಿ) ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದೆ.
ಈ 3 ದಿನಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ನಡೆಯುವ ಶಿಬಿರದಲ್ಲಿ ಮಧುಮೇಹ, ಕುತ್ತಿಗೆ/ಥೈರಾಯ್ಡ್ ಊತ, ಹುಡುಗಿಯರಲ್ಲಿ ಮುಖ/ ದೇಹದಲ್ಲಿ ಕೂದಲು ಬೆಳವಣಿಗೆ, ತೂಕ ಹೆಚ್ಚಳ/ನಷ್ಟ, ಬೊಜ್ಜು, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು, ಮಕ್ಕಳಲ್ಲಿ ಬೆಳವಣಿಗೆ ಹಾಗೂ ವಿಕಸನ ಸಮಸ್ಯೆಗಳು, ಆರಂಭಿಕ / ವಿಳಂಬಿತ ಪ್ರೌಢವಸ್ಥೆ, ಮೂಳೆಗಳ ದುರ್ಬಲತೆ, ಕ್ಯಾಲ್ಸಿಯಂ ಸಂಬಂಧಿತ ಸಮಸ್ಯೆ, ನಡುಕ/ಹೆಚ್ಚಿನ ಬೆವರುವಿಕೆ, ಧ್ವನಿಯಲ್ಲಿ ಬದಲಾವಣೆ, ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವವರು. ಅದೇರೀತಿ ಮಕ್ಕಳಲ್ಲಿ ತೂಕ ಹೆಚ್ಚಿಸುವಲ್ಲಿ ವೈಫಲ್ಯ, ರಕ್ತದಲ್ಲಿ ಕಡಿಮೆ ಮಟ್ಟದ ಸಕ್ಕರೆ ಪ್ರಮಾಣ, ಮೂಳೆ ವಿರೂಪ, ಡೌನ್ ಸಿಂಡ್ರೊಮ್, ಬೆಳವಣಿಗೆಯ ಸಮಸ್ಯೆ ಇರುವವರು ಪ್ರಯೋಜನ ಪಡೆಯಬಹುದು.
ಶಿಬಿರದ ನೋಂದಣಿ ಮತ್ತು ಮೊದಲ ಸಮಾಲೋಚನೆ ಉಚಿತ, ಹೊರರೋಗಿ ಪರೀಕ್ಷೆಗಳಲ್ಲಿ 25 ಶೇ. ರಿಯಾಯಿತಿ, ಒಳರೋಗಿಯ ಒಟ್ಟು ಮೊತ್ತದಲ್ಲಿ 10 ಶೇ. ರಿಯಾಯಿತಿ ಇರಲಿದೆ.
ಶಿಬಿರದಲ್ಲಿ ಖ್ಯಾತ ಎಂಡೋಕ್ರಿನೊಲೊಜಿಸ್ಟ್ ಡಾ.ಕಿಶನ್ ದೆಲಂಪಾಡಿ ಮತ್ತು ಮಕ್ಕಳ ಎಂಡೋಕ್ರಿನೊಲೊಜಿಸ್ಟ್ ಡಾ. ಸುಪ್ರೀತ ಶೆಟ್ಟಿ, ಸಮಾಲೋಚನೆಗೆ ಲಭ್ಯವಿರುವರು.
ನೋಂದಣಿಗಾಗಿ ದೂ.ಸಂ. 0824-2223252/8494890600 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.







