Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. 2021ರಲ್ಲಿ ಶಾಂಘೈನಲ್ಲಿ ನಡೆಯುವ...

2021ರಲ್ಲಿ ಶಾಂಘೈನಲ್ಲಿ ನಡೆಯುವ ‘ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ’ಗೆ ತರಬೇತಿ: ಸಚಿವ ಎಚ್.ನಾಗೇಶ್

ವಾರ್ತಾಭಾರತಿವಾರ್ತಾಭಾರತಿ6 Jan 2020 7:57 PM IST
share
2021ರಲ್ಲಿ ಶಾಂಘೈನಲ್ಲಿ ನಡೆಯುವ ‘ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ’ಗೆ ತರಬೇತಿ: ಸಚಿವ ಎಚ್.ನಾಗೇಶ್

ಬೆಂಗಳೂರು, ಜ.6: 2021ರಲ್ಲಿ ಚೀನಾದ ಶಾಂಘೈನಲ್ಲಿ ನಡೆಯುಲಿರುವ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ರಾಜ್ಯದ ಪ್ರತಿಭಾವಂತ ಯುವಕರಿಗೆ ಅಗತ್ಯ ತರಬೇತಿ ನೀಡಲು ರಾಜ್ಯ ಸರಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅಬಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಎಚ್.ನಾಗೇಶ್ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ 75 ಸದಸ್ಯ ರಾಷ್ಟ್ರಗಳು ಮತ್ತು ವಲಯಗಳು ಸೇರಿವೆ ಎಂದರು. 2020ರ ಮಾರ್ಚ್ ತಿಂಗಳಲ್ಲಿ ‘ಇಂಡಿಯಾ ಸ್ಕಿಲ್ಸ್ ಕರ್ನಾಟಕ 2020’ಯ ಆತಿಥ್ಯ ವಹಿಸಲು ನಮ್ಮ ರಾಜ್ಯ ಸಜ್ಜಾಗಿದೆ. ಈ ಸ್ಪರ್ಧೆಯಲ್ಲಿ ವೀಜೆತರಾದವರಿಗೆ ಉತ್ತಮ ರೀತಿಯಲ್ಲಿ ತರಬೆತಿ ನೀಡಿ, ಅವರು ಪ್ರಾದೇಶಿಕ, ರಾಷ್ಟ್ರೀಯ ಮಟ್ಟದ ಸ್ಪರ್ಧೆ ಮತ್ತು ಶಾಂಘೈನಲ್ಲಿ ನಡೆಯುವ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜುಗೊಳಿಸುವುದು ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ನಾಗೇಶ್ ತಿಳಿಸಿದರು.

ರಾಜ್ಯ ಸರಕಾರವು ಟೊಯೊಟಾ, ಬಾಷ್, ಆಟೋಡೆಸ್ಕ್, ಷ್ನೆಯ್ಡರ್, ಎಲೆಕ್ಟ್ರಿಕ್, ಯುಟಿಎಲ್ ಟೆಕ್ನಾಲಜಿಸ್ ಇತ್ಯಾದಿ ಉದ್ದಿಮೆಗಳೊಂದಿಗೆ ಕೈ ಜೋಡಿಸಿದೆ. ಇಲಾಖೆ ಆಯ್ಕೆ ಮಾಡಿರುವ ಕೌಶಲ್ಯದಲ್ಲಿ ಪರಿಣಿತರು ಆಯ್ಕೆಯಾದರೆ 2021ರ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ಸು ಕಾಣಬಹುದು ಎಂದು ಅವರು ಹೇಳಿದರು.

ಇಂಡಿಯಾ ಸ್ಕಿಲ್ಸ್ 2020ರಲ್ಲಿ ಯಾರು ಭಾಗವಹಿಸಬಹುದು?: 1999ರ ಜನವರಿ 1ರಂದು ಮತ್ತು ಆನಂತರ ಜನಿಸಿದ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಲ್ಲ ಕೌಶಲ್ಯಗಳಲ್ಲಿ ಸ್ಪರ್ಧಿಸಬಹುದು. ಮೆಕಾಟ್ರಾನಿಕ್ಸ್, ಮ್ಯಾನುಫ್ಯಾಕ್ಚರಿಂಗ್, ಟೀಮ್ ಚಾಲೆಂಜ್, ಎರೋನಾಟಿಕಲ್ ಎಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯೂರಿಟಿ ಮತ್ತು ವಾಟರ್ ಟೆಕ್ನಾಲಜಿ, ಐಟಿ-ನೆಟ್ವರ್ಕ್ ಕೇಬಲಿಂಗ್ ಇವುಗಳಲ್ಲಿ ಭಾಗವಹಿಸಲು ಇಚ್ಛಿಸುವವರು 1ನೇ ಜನವರಿ 1996ರ ನಂತರ ಜನಿಸಿರಬೇಕು ಎಂದು ಅವರು ತಿಳಿಸಿದರು.

ಮೊಬೈಲ್ ರೊಬೊಟಿಕ್ಸ್, ಸೈಬರ್ ಸೆಕ್ಯೂರಿಟಿ, ಲ್ಯಾಂಡ್‌ಸ್ಕೇಪ್ ಗಾರ್ಡನಿಂಗ್, ಕಾಂಕ್ರೀಟ್ ನಿರ್ಮಾಣ ಕಾರ್ಯ ಮತ್ತು ಮೆಕಾಟ್ರಾನಿಕ್ಸ್ ಇವುಗಳು ತಂಡ ಕೌಶಲ್ಯ ಸ್ಪರ್ಧೆಗಳಾಗಿವೆ. ಸ್ಪರ್ಧೆಗೆ ಇಬ್ಬರು ಸ್ಪರ್ಧಿಗಳಿಂದ ಕೂಡಿದ ತಂಡ ಸ್ಪರ್ಧಿಸುವುದು ಅಗತ್ಯ ಎಂದು ನಾಗೇಶ್ ವಿವರಿಸಿದರು.

ಆಯ್ಕೆ ಪ್ರಕ್ರಿಯೆ ಹೇಗೆ?: ವರ್ಲ್ಡ್ ಸ್ಕಿಲ್ಸ್-2020ರಲ್ಲಿ ಪಾಲ್ಗೊಳ್ಳಲು ಸ್ಪರ್ಧಿಸಲು www.worldskillsindia.co.in ಅಥವಾ www.kaushalkar.com ನೋಂದಣಿ ಮಾಡಿಸಿಕೊಂಡಿರಬೇಕು. ವಲಯ ಮತ್ತು ರಾಜ್ಯಮಟ್ಟದ ಸ್ಪರ್ಧಾರ್ಥಿಗಳನ್ನು ರಾಜ್ಯ ಸರಕಾರವು ಅಥವಾ Sector Skills Council (SSC) ಸಹಯೋಗದೊಂದಿಗೆ ಆಯ್ಕೆ ಮಾಡಲಿದೆ ಎಂದು ಅವರು ಹೇಳಿದರು.

ಆಯ್ಕೆಗೊಂಡ ರಾಜ್ಯ ಚಾಂಪಿಯನ್ನರು ಪ್ರಾದೇಶಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಾದೇಶಿಕ ಹಂತದಲ್ಲಿ ಗೆದ್ದವರು ವರ್ಲ್ಡ್ ಸ್ಕಿಲ್ಸ್-2020ರಲ್ಲಿ ಭಾಗವಹಿಸುತ್ತಾರೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ಜನವರಿ 15ರೊಳಗೆ ನೋಂದಾಯಿಸಿಕೊಳ್ಳಬೇಕು. ವಲಯ ಮಟ್ಟದ ಸ್ಪರ್ಧೆಗಳು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲ್ಬುರ್ಗಿ ನಗರಗಳಲ್ಲಿ ಜರುಗಲಿವೆ. ರಾಜ್ಯಮಟ್ಟದ ಸ್ಪರ್ಧೆಯು ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ನಾಗೇಶ್ ತಿಳಿಸಿದರು.

ಮಾಹಿತಿ ಹಾಗೂ ಸ್ಪರ್ಧೆಯ ದಿನಾಂಕಗಳಿಗಾಗಿ www.worldskillsindia.co.in ವೆಬ್‌ಸೈಟ್‌ಗೆ ಲಾಗಿನ್ ಆಗಬಹುದು. ಅರ್ಹತೆಯ ಮಾನದಂಡ, ನೋಂದಾವಣೆ, ವೌಲ್ಯಮಾಪನದ ರೀತಿ, ನಿಯಮ ಮತ್ತು ಷರತ್ತುಗಳು, ವಿವಾದ ಬಗೆಹರಿಸುವ ವಿಧಾನ ಮತ್ತು ಪ್ರಶಸ್ತಿ ಇವುಗಳ ಕುರಿತು ಸಂಪೂರ್ಣ ಮಾಹಿತಿಗಾಗಿ www.worldskillsindia.co.in ಅಥವಾ www.kaushalkar.com ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದಿಂದ ಆಯ್ಕೆಯಾದ ಕೌಶಲ್ಯಗಳು: 3ಡಿ ಡಿಜಿಟಲ್ ಗೇಮ್ ಆರ್ಟ್, ಕಾರ್ ಪೇಂಟಿಂಗ್, ಸರಕು ಸಾಗಾಣೆ, ಉಡುಪು, ಕಾರ್ಪೆಂಟರಿ, ಗ್ರಾಫಿಕ್ ಡಿಸೈನ್ ಟೆಕ್ನಾಲಜಿ, ಆಟೋ ಬಾಡಿ ರಿಪೇರಿ, ಕ್ಲೌಡ್ ಕಂಪ್ಯೂಟಿಂಗ್, ಹೇರ್‌ಡ್ರೆಸಿಂಗ್, ಆಟೋಮೊಬೈಲ್ ಟೆಕ್ನಾಲಜಿ, ಸಿಎನ್‌ಸಿ ಟರ್ನಿಂಗ್, ಇಂಡಸ್ಟ್ರಿಯಲ್ ಕಂಟ್ರೋಲ್, ಬ್ಯೂಟಿಥೆರಪಿ, ಸೈಬರ್ ಸೆಕ್ಯೂರಿಟಿ, ಇನ್‌ರ್ಮೇಶನ್ ನೆಟ್‌ವರ್ಕ್ ಕೇಬಲಿಂಗ್.

ಬ್ರಿಕ್ ಲೇಯಿಂಗ್, ಎಲೆಕ್ಟ್ರಿಕಲ್ ಇಂಸ್ಟಾಲೇಶನ್ಸ್, ಸಾಫ್ಟ್‌ವೇರ್ ಸಲ್ಯೂಶನಾರ್ ಬ್ಯುಸಿನೆಸ್, ಕ್ಯಾಬಿನೆಟ್ ಮೇಕಿಂಗ್, ಫ್ಲೋರಿಸ್ಟ್ರಿ, ಜ್ಯುವೆಲ್ಲರಿ ಮೇಕಿಂಗ್, ಲ್ಯಾಂಡ್‌ಸ್ಕೇಪ್ ಮತ್ತು ಗಾರ್ಡನಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಸೈನ್‌ಕ್ಯಾಡ್, ಮೆಕಾಟ್ರಾನಿಕ್ಸ್, ಪೇಂಟಿಂಗ್ ಮತ್ತು ಡೆಕೋರೇಟಿಂಗ್, ಪಾಟಿಸ್ಸೆರಿ ಅಂಡ್ ಕಂನೆಕ್ಷರಿ, ಪ್ಲಾಸ್ಟರಿಂಗ್ ಮತ್ತು ಡ್ರೈ ವಾಲ್ ಸಿಸ್ಟಮ್.

ಪ್ಲಾಸ್ಟಿಕ್ ಡೈ ಇಂಜಿನಿಯರಿಂಗ್, ಪ್ರಿಂಟ್ ಮೀಡಿಯಾ ಟೆಕ್ನಾಲಜಿ, ಪ್ರೊಟೊಟೈಪ್ ಮಾಡ್ಲಿಂಗ್, ರೊಬೊಟಿಕ್ಸ್, ವಿಷ್ಯುವಲ್ ಮರ್ಚೆಂಡೈಸಿಂಗ್, ವಾಲ್ ಅಂಡ್ ಫ್ಲೋರ್‌ಟೈಲಿಂಗ್, ವಾಟರ್ ಟೆಕ್ನಾಲಜಿ, ವೆಬ್‌ಟೆಕ್ನಾಲಜಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X