ಯುವತಿಯ ಅತ್ಯಾಚಾರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ

ಉಡುಪಿ, ಜ.6: ಕಾಸರಗೋಡು ಮೊಗ್ರಾಲ್ ನಲ್ಲಿ ಯುವತಿಯ ಅತ್ಯಾಚಾರ ನಡೆಸಿ ಮತಾಂತರಗೊಳಿಸುವಂತೆ ಬೆದರಿಕೆ ಹಾಕಿದ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಸೋಮವಾರ ಉಡುಪಿ ಎಸ್ಪಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಕೆ.ಶೆಟ್ಟಿ, ರಶ್ಮಿತಾ ಬಿ.ಶೆಟ್ಟಿ. ಲೀಲಾ ಅಮೀನ್, ರಮಾ ಶೆಟ್ಟಿ, ಭಾರತಿ ಚಂದ್ರಶೇಖರ್, ರಜನಿ ಹೆಬ್ಬಾರ್, ಕೇಸರಿ ಯುವರಾಜ್, ಸುಮಾ ಶೆಟ್ಟಿ, ರಶ್ಮಿ ಭಟ್, ದಯಾಶಿನಿ, ರೋಹಿಣಿ, ಶಶಿಕಲಾ ಉಪಸ್ಥಿತರಿದ್ದರು.
Next Story





