ಮಾದಕ ದ್ರವ್ಯ ಸೇವನೆ ಆರೋಪ : ಐವರು ಸೆರೆ
ಬಂಟ್ವಾಳ, ಜ. 6: ಮಾದಕದ್ರವ್ಯ ಸೇವನೆ ಆರೋಪದಡಿ ಯುವಕರ ತಂಡವೊಂದನ್ನು ಬಂಟ್ವಾಳ ನಗರ ಪೊಲೀಸರು ರವಿವಾರ ರಾತ್ರಿ ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಧನುಷ್ (20), ವಿಕಾಸ್ (20), ರಾಕೇಶ್ (20), ಅಶ್ವತ್ (20), ಹರೀಶ್ (20) ಬಂಧಿತ ಯುವಕರು.
ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಕಾಲೇಜೊಂದರ ಮೈದಾನಕ್ಕೆ ಪೊಲೀಸರು ರವಿವಾರ ರಾತ್ರಿ ಸುಮಾರು 12ರ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವಕರ ತಂಡವು ಅನುಮಾನಾಸ್ಪದವಾಗಿ ನಿಂತಿದ್ದು, ವಿಚಾರಿಸಿದಾಗ ಮಾದಕ ದ್ರವ್ಯ ಸೇವಿಸಿರುವುದಾಗಿ ಕಂಡುಬಂದಿದೆ. ಬಳಿಕ ವೈದ್ಯರಲ್ಲಿ ಪರಿಶೀಲಿಸಿದಾಗ ಖಚಿತಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
Next Story





