ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೆ ಊಟದ ವ್ಯವಸ್ಥೆ: ಸೌಹಾರ್ದದ ಸಂದೇಶ ಸಾರಿದ ಯುವಕರು

ಮುಂಡಗೋಡ, ಜ.6: ಅಯ್ಯಪ್ಪ ಸ್ವಾಮಿ ವೃತಧಾರಿಗಳಿಗೆ ಮುಸ್ಲಿಂ ಯುವಕರು ಊಟದ ವ್ಯವಸ್ಥೆ ಮಾಡಿ, ಅವರ ಜೊತೆಯಲ್ಲಿ ಊಟ ಮಾಡುವ ಮೂಲಕ ಕೋಮು ಸೌಹಾರ್ದ ಮೆರೆದಿದ್ದಾರೆ.
20-30 ಮುಸ್ಲಿಂ ಯುವಕರ ಗುಂಪು ಪಟ್ಟಣದ ಗಾಂಧಿ ನಗರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಗುರು ಸ್ವಾಮಿಗೆ ಸನ್ಮಾನಿಸಿ ಸುಮಾರು 90ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಯುವಕರು ಆಹಾರ ಸಾಮಗ್ರಿಗಳನ್ನು ತಂದು ಕೊಟ್ಟಿದ್ದು, ಅದನ್ನು ಬಳಸಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಅಡುಗೆ ಸಿದ್ದಪಡಿಸಿದ್ದಾರೆ. ನಂತರ ಮುಸ್ಲಿಂ ಯುವಕರು ವ್ರತಧಾರಿಗಳಿಗೆ ಊಟ ಬಡಿಸಿ ಅವರ ಜೊತೆಗೂಡಿ ಊಟ ಮಾಡಿದ್ದಾರೆ. ಈ ಮೂಲಕ ಏಕತೆಯ ಸಂದೇಶ ಸಾರಿದ್ದಾರೆ.
.jpg)
Next Story





