ಅಹಂ ಬಿಟ್ಟು ಸಿಎಎ ಬದಿಗಿರಿಸಿ: ಚೇತನ್ ಭಗತ್

ಮುಂಬೈ, ಜ. 6: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವರಿಗೆ ಬೆಂಬಲ ವ್ಯಕ್ತಪಡಿಸಿರುವ ಲೇಖಕ ಚೇತನ್ ಭಗತ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬದಿಗಿರಿಸಿ. ರಾಷ್ಟ್ರೀಯ ಪೌರತ್ವ ನೋಂದಣಿ ಅಸ್ತಿತ್ವಕ್ಕೆ ಬರುವುದಿಲ್ಲ ಎಂದು ಘೋಷಿಸಿ. ಅಹಂ ರಕ್ಷಿಸಲು ದೇಶವನ್ನು ಹೊತ್ತಿ ಉರಿಯಲು ಬಿಡಬೇಡಿ ಎಂದಿದ್ದಾರೆ.
ತನ್ನ ಟ್ವೀಟ್‌ನಲ್ಲಿ ಭಾರತದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಕೇಂದ್ರೀಕರಿಸಿ ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿರುವ ಚೇತನ ಭಗತ್, ದಿಲ್ಲಿಯ ಜೆಎನ್‌ಯುನಲ್ಲಿ ಗೂಂಡಾಗಳಿಂದ ಕ್ರೂರವಾಗಿ ದಾಳಿಗೊಳಗಾದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Next Story