ವಿಜ್ಞಾನ ಪರಿಷತ್ತಿನ ತ್ರೈವಾರ್ಷಿಕ ಚುನಾವಣೆ: ಫೆ.23ಕ್ಕೆ ಮತದಾನ
ಬೆಂಗಳೂರು, ಜ. 6: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು ಪ್ರಸ್ತುತ ಪರಿಷತ್ತಿನ 2019-22ನೆ ಅವಧಿಯ ತ್ರೈವಾರ್ಷಿಕ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿರುತ್ತದೆ.
ವಿಜ್ಞಾನ ಪರಿಷತ್ತು ಒಟ್ಟು 8,385 ಸದಸ್ಯರನ್ನು ಒಳಗೊಂಡಿದ್ದು, ಇವರು ರಾಜ್ಯದ 4 ಕಂದಾಯ ವಿಭಾಗಗಳಾದ ಬೆಳಗಾವಿ, ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ವಿಭಾಗಗಳಿಂದ ತಲಾ 6 ಜನರಂತೆ ಒಟ್ಟು 24 ಪ್ರತಿನಿಧಿಗಳನ್ನು ಚುನಾಯಿಸಲಿದ್ದಾರೆ.
ಅವುಗಳಲ್ಲಿ ಬೆಳಗಾವಿ ವಿಭಾಗದಿಂದ ಓರ್ವ ಮಹಿಳೆ ಹಾಗೂ ಕಲಬುರಗಿ ಭಾಗದಿಂದ ಓರ್ವ ಎಸ್ಸಿ/ಎಸ್ಟಿ ಸಮುದಾಯದ ಪ್ರತಿನಿಧಿಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಪರಿಷತ್ತಿನ ಸದಸ್ಯರು ಜ.6ರಿಂದ ಜ.16 ರೊಳಗೆ ಆಯಾ ವಿಭಾಗದಲ್ಲಿ ನಾಮಪತ್ರ ಸಲ್ಲಿಸಬಹುದಾಗಿದ್ದು, ಜ.27 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಫೆ.23ರಂದು ನಿಗದಿಪಡಿಸಿದ ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ. ವಿಜ್ಞಾನ ಪರಿಷತ್ತಿನ ಚುನಾವಣೆ ಕುರಿತಾದ ಪ್ರಕಟಣೆಗಳನ್ನು ನಿರಂತರವಾಗಿ ಕರಾಪ ವೆಬ್‌ಸೈಟ್‌ನಲ್ಲಿ www.krvp.org ಪ್ರಕಟಿಸಲಾಗುತ್ತದೆ.
ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಕರಾಪ ವೆಬ್‌ಸೈಟಿಗೆ ಭೇಟಿ ನೀಡಲು ಮುಖ್ಯ ಚುನಾವಣಾಧಿಕಾರಿ, ರಾಜ್ಯ ವಿಜ್ಞಾನ ಪರಿಷತ್ತು ತ್ರೈವಾರ್ಷಿಕ ಚುನಾವಣೆ ಇವರು ತಿಳಿಸಿದ್ದಾರೆ. ಮಾಹಿತಿಗೆ ಚುನಾವಣಾಧಿಕಾರಿಗಳ ಮೊ. 91487 00666ಅನ್ನು ಸಂಪರ್ಕಿಸಲು ಕೋರಿದೆ.







