ಜೆಎನ್‌ಯು ಹಲ್ಲೆ ಖಂಡಿಸಿ ಕ್ಯಾಂಡಲ್ ಹಚ್ಚಿ ಧರಣಿ

ಉಡುಪಿ, ಜ.7: ಜೆಎನ್‌ಯು ವಿದ್ಯಾರ್ಥಿ ಮತ್ತು ಉಪನ್ಯಾಸಕರ ಮೇಲಿನ ಹಲ್ಲೆಯನ್ನು ಖಂಡಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಸೋಮವಾರ ರಾತ್ರಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕ್ಯಾಂಡಲ್ ಹಿಡಿದು ಧರಣಿ ನಡೆಸಿತು.
ಮಣಿಪಾಲದ ಮಾಹೆಯ ಸೇರಿದಂತೆ ವಿವಿಧ ಕಾಲೇಜುಗಳ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ಹಲ್ಲೆಯನ್ನು ಖಂಡಿಸಿ, ಹಲ್ಲೆಗೊಳಗಾದ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಚಿಂತಕ, ಪ್ರಗತಿಪರ ಹೋರಟಗಾರ ಪ್ರೊ. ಫಣಿರಾಜ್, ಯುವ ಹೋರಾಟಗಾರ ಸಂವರ್ಥ್ ಸಾಹಿಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಐಓ ಉಡುಪಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಸದಸ್ಯರಾದ ನಾಸೀರ್, ಶಾರೂಕ್, ವಸೀಮ್, ಫಾಝೀಲ್, ಅಯಾನ್ ಮೊದಲಾದವರು ಉಪಸ್ಥಿತರಿದ್ದರು. ಫೈಝಲ್ ಮಲ್ಪೆಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story





