Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮುಸ್ಲಿಮರು ಅಮಾಯಕರಲ್ಲ, ದೇಶವನ್ನು...

ಮುಸ್ಲಿಮರು ಅಮಾಯಕರಲ್ಲ, ದೇಶವನ್ನು ವಶಕ್ಕೆ ಪಡೆಯಲು ಪ್ರತಿಭಟಿಸುತ್ತಿದ್ದಾರೆ: ಕಲ್ಲಡ್ಕ ಪ್ರಭಾಕರ ಭಟ್

"ಅಧಿಕಾರದ ಆಸೆಯಿಂದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲಿಲ್ಲ"

ವಾರ್ತಾಭಾರತಿವಾರ್ತಾಭಾರತಿ7 Jan 2020 7:35 PM IST
share
ಮುಸ್ಲಿಮರು ಅಮಾಯಕರಲ್ಲ, ದೇಶವನ್ನು ವಶಕ್ಕೆ ಪಡೆಯಲು ಪ್ರತಿಭಟಿಸುತ್ತಿದ್ದಾರೆ: ಕಲ್ಲಡ್ಕ ಪ್ರಭಾಕರ ಭಟ್

ತುಮಕೂರು, ಜ.7: ಪೌರತ್ವ ಕಾಯ್ದೆ ವಿರೋಧಿಸುವವರು ನಾಶವಾಗಬೇಕು ಎಂಬ ಪ್ರತಿರೋಧವನ್ನು ತೋರಿಸಲು ಹಿಂದೂ ಸಮಾಜ ಸಂಘಟಿತವಾಗಬೇಕಿದೆ. ಬಾಂಗ್ಲಾ ನುಸುಳುಕೋರರಿಗೆ ತುಮಕೂರು, ಬೆಂಗಳೂರು ಕೇಂದ್ರಗಳಾಗಿವೆ ಎಂದು ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಹೇಳಿದರು.

ನಗರದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ರಾಷ್ಟ್ರೀಯ ನಾಗರಿಕ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಾಂಗ್ಲಾ, ರೋಹಿಂಗ್ಯ, ಪಾಕಿಸ್ತಾನಿಗಳಿಗೆ ಭಾರತದ ಪೌರತ್ವ ಕೊಡುವುದಿಲ್ಲ. ಪೌರತ್ವ ಕಾಯ್ದೆಯ ಮೇಲೆ ಎಸಗುತ್ತಿರುವ ಆಕ್ರಮಣವನ್ನು ಹಿಂದೂ ಸಮಾಜ ಹಿಮ್ಮೆಟ್ಟಿಸಬೇಕು ಎಂದ ಅವರು, ಕೈಗಾರಿಕೆಗಳಲ್ಲಿ, ತೋಟಗಳಲ್ಲಿ ಬಾಂಗ್ಲಾದೇಶಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಡಿ ಎಂದು ಕರೆ ನೀಡಿದರು.

ಪೌರತ್ವದ ಹೆಸರಿನಲ್ಲಿ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ತರುವ ಪ್ರಯತ್ನ ನಡೆಸಲಾಗುತ್ತಿದೆ. ಹಿಂದೂ ಸಮಾಜ ಸುಮ್ಮನಿದ್ದ ಕಾರಣಕ್ಕೆ ಮತಗಳ ಆಧಾರದ ಮೇಲೆ ಅಖಂಡ ಹಿಂದೂಸ್ಥಾನ ತ್ರಿಖಂಡವಾಯಿತು. ಮತೀಯ ಆಧಾರದ ಮೇಲೆ ದೇಶ ವಿಭಜನೆಯಾದರೂ ಅಧಿಕಾರದ ಆಸೆಯಿಂದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲಿಲ್ಲ, ಅಂತಹವರ ಸಂತತಿಯಿಂದ ಇಂದು ಭಾರತ ತೊಂದರೆಯನ್ನು ಅನುಭವಿಸುವಂತೆ ಆಗಿದೆ. ಹಿಂದೂ ಸಮಾಜ ಎಚ್ಚೆತ್ತಿದೆ. ಈಗ ಸುಮ್ಮನೆ ಕೂರುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಅನೇಕ ಯೋಜನೆಗಳು ಜಾರಿಗೆ ಬಂದವು, ಹಿಂದೂಗಳು ಜನಸಂಖ್ಯೆಯನ್ನು ಕಡಿಮೆ ಮಾಡಿದರೆ, ಮುಸ್ಲಿಮರು ಹೆಚ್ಚಳ ಮಾಡಿದರು. ದೇಶದಲ್ಲಿರುವ ಮುಸ್ಲಿಮರಿಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲವೇ?, ಮುಸ್ಲಿಂ ಜನಸಂಖ್ಯೆ ಹೆಚ್ಚಾದಂತೆ ದೇಶದಲ್ಲಿಯೇ ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಕೋಲಾರದಲ್ಲಿ ಪೌರತ್ವ ಪರ ಪ್ರತಿಭಟನೆ ನಡೆಸಲು ಆಗದಷ್ಟು, ನಮ್ಮ ದೇವರ ಮೆರವಣಿಗೆ ನಡೆಸಲು ಸಾಧ್ಯವಾಗದಷ್ಟು ಹಿಂದೂಗಳು ಅಸಹಾಯಕರಾಗಿದ್ದೇವೆ ಎಂದರು

ಜನಸಂಖ್ಯೆ ಹೆಚ್ಚಳಕ್ಕಾಗಿ ಮುಸ್ಲಿಮರು ಲವ್‍ ಜಿಹಾದ್ ಶುರುಮಾಡಿದರು. ಭೂಜಿಹಾದ್, ಗೋಹತ್ಯೆ ಎಲ್ಲವೂ ಭಾರತದ ಹಿಂದೂಗಳಿಗೆ ತೊಂದರೆ ನೀಡಲು ಮಾಡುತ್ತಿರುವ ಯೋಜಿತ ಕಾರ್ಯ. ಯಾವುದೇ ಮುಸ್ಲಿಂ ರಾಷ್ಟ್ರಗಳಲ್ಲಿ ಗೋಹತ್ಯೆ ಮಾಡದೇ ಇದ್ದರೂ ಭಾರತದಲ್ಲಿ ಮಾತ್ರ ಗೋಹತ್ಯೆ ಏಕೆ ಮಾಡುತ್ತಾರೆ?. ಹಿಂದೆ ದೇಶಕ್ಕೆ ಅಂಟಿದ್ದ ನಪುಂಸಕ ನಾಯಕತ್ವ ಈಗ ಇಲ್ಲ. ಈಗ ಪೌರತ್ವದ ನಾಯಕತ್ವ ಸಿಕ್ಕಿದೆ, ಹಿಂದೂಗಳು ಹೇಡಿಗಳಲ್ಲ ಎನ್ನುವುದನ್ನು ತೋರಿಸಲು ಪೌರತ್ವ ಕಾಯ್ದೆ ಬೆಂಬಲಿಸಬೇಕಿದೆ ಎಂದರು.

ದೇಶದಲ್ಲಿ ಅಬ್ದುಲ್ ಕಲಾಂ ಸಂತಾನಗಳು ಹೆಚ್ಚಾಗಬೇಕೆ ಹೊರತು ಕಸಬ್ ಸಂತತಿಗಳಲ್ಲ. ಬಾಂಗ್ಲಾ ನುಸುಳುಕೋರರಿಗೆ ನೀಡುವ ಸೌಲಭ್ಯವನ್ನು ನಮ್ಮ ಹಿಂದೂಗಳಿಗೆ ನೀಡಬಾರದೇ?, ಮತಕ್ಕಾಗಿ ಓಲೈಸಿದ ಕಾಂಗ್ರೆಸ್‍ ನ ಪಾಪಿಗಳಿಂದ ಇಂತಹ ಪರಿಸ್ಥಿತಿಯನ್ನು ಹಿಂದೂಗಳು ಎದುರಿಸುತ್ತಿದ್ದೇವೆ. ಬೇರೆಲ್ಲ ಧರ್ಮಗಳಿಗೆ ಅನೇಕ ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ಇರುವುದು ಹಿಂದೂಸ್ಥಾನ ಮಾತ್ರ. ಎಲ್ಲ ಧರ್ಮೀಯರಿಗೆ ಭಾರತ ಆತಿಥ್ಯವನ್ನು ನೀಡುತ್ತದೆ, ನಮ್ಮ ಸಂಸ್ಕೃತಿ, ಗೌರವಗಳಿಗೆ ಮನ್ನಣೆ ನೀಡುವವರು ಮಾತ್ರ ಇಲ್ಲಿ ನೆಲೆಸಬಹುದು ಎಂದು ಹೇಳಿದರು.

ಅಶ್ವತ್ಥ್ ನಾರಾಯಣ ಅವರು ಮಾತನಾಡಿ, ಮೋದಿ ಅಧಿಕಾರವಧಿಯಲ್ಲಿ ಶ್ರೀಲಂಕಾದ ತಮಿಳರು ನೆಮ್ಮದಿಯಾಗಿದ್ದಾರೆ, ರೋಹಿಂಗ್ಯಗಳು, ಬರ್ಮಾದ ವಿರೋಧಿಗಳು, ಚೀನಾ, ಬಾಂಗ್ಲಾಕ್ಕೆ ಹೋಗಲ್ಲ, ಅವರಿಗೆ ಭಾರತವೇ ಬೇಕು. ಪಾಕಿಸ್ತಾನ ಹಾಗೂ ಬಾಂಗ್ಲಾದವರಿಗೆ ಐಎಸ್ ತರಬೇತಿ ನೀಡುತ್ತಿದೆ. ಇಂತಹವರಿಗೆ ಪೌರತ್ವವನ್ನು ನೀಡಬೇಕೆ ಎಂದು ಪ್ರಶ್ನಿಸಿದರು.

ದೇಶವನ್ನು ವಿಭಜಿಸಿದ ಪಕ್ಷದ ಬೆಂಬಲದಿಂದ ಗೆದ್ದ ರಾಹುಲ್‍ ಗಾಂಧಿ ಅವರಿಗೆ ಬುದ್ಧಿ ಇಲ್ಲ, ರಾಹುಲ್ ಗಾಂಧಿ ಯಾವ ರಾಜ್ಯಕ್ಕೂ ಮುಖ್ಯಮಂತ್ರಿಯೂ ಆಗಿಲ್ಲ, ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಏನಾಗಿದೆ, ಮುಖ್ಯಮಂತ್ರಿಯಾಗಿದ್ದವರು ಇಂತಹ ದೇಶ ವಿರೋಧಿಗಳಿಗೆ ಪೌರತ್ವ ನೀಡಬೇಕು ಎನ್ನುತ್ತಿದ್ದಾರೆ. ಕಮ್ಯುನಿಸ್ಟರು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜನರು ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿಎಎ ಬಗ್ಗೆ ಎಡಪಂಥೀಯರಿಗೆ ಸರಿಯಾಗಿ ಗೊತ್ತಿಲ್ಲ, ದೇಶದಲ್ಲಿ ಸೃಷ್ಟಿಸುತ್ತಿರುವ ಅರಾಜಕತೆ ಪ್ರಾಯೋಜಿತ ಪ್ರತಿಭಟನೆ, ಸಿಎಎಯಿಂದ ಮೋದಿಗೆ ವೈಯಕ್ತಿಕವಾಗಿ ಏನು ಆಗಬೇಕಿಲ್ಲ, ಕಸವನ್ನು ಹೊರ ಹಾಕುವ ಕೆಲಸ ಮಾಡಲಾಗುತ್ತಿದ್ದು, ಕಸ ಬೆಂಬಲಿಸುವವರನ್ನು ಹೊರಹಾಕಬೇಕಾಗುತ್ತದೆ ಎಂದ ಅವರು ಹೇಳಿದರು.

ಮುಖಂಡರಾದ ಕೋರಿಮಂಜಣ್ಣ, ಬೆಳ್ಳಾವಿ ಕಾರದಮಠದ ವೀರಬಸವ ಸ್ವಾಮೀಜಿ, ರೇವಣ್ಣ ಸಿದ್ದೇಶ್ವರಸ್ವಾಮೀಜಿ, ನಾಗೇಂದ್ರಕುಮಾರ್, ರೂಪ ಧನಂಜಯ್, ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜ್ಯೋತಿಗಣೇಶ್, ಮಸಾಲೆ ಜಯರಾಂ, ಜಿ.ಪಂ.ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಮಾಜಿ ಶಾಸಕ ಸುರೇಶ್‍ ಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಹುಲಿನಾಯ್ಕರ್, ಜಿ.ಪಂ.ಸದಸ್ಯ ವೈ.ಎಚ್.ಹುಚ್ಚಯ್ಯ, ದಿಶಾ ಸಮಿತಿ ಸದಸ್ಯೆ ಪ್ರೇಮಾ ಹೆಗಡೆ ಸೇರಿದಂತೆ ಇತರರಿದ್ದರು.

ಪೌರತ್ವದ ಹೆಸರಲ್ಲಿ ಮಂಗಳೂರಿನಲ್ಲಿ ದಾಂಧಲೆ ನಡೆಯಿತು, ಕಾಶ್ಮೀರದಲ್ಲಿ ಬೆಂಕಿ ಇಟ್ಟಂತೆ, ಇಲ್ಲಿಯೂ ಇಟ್ಟರು, ಮಂಗಳೂರಿನಲ್ಲಿ ನಮ್ಮನ್ನು ಬದುಕಿಸಿದ್ದು ಪೊಲೀಸ್ ವರಿಷ್ಠಾಧಿಕಾರಿಗಳು, ಮುಸ್ಲಿಮರು ಅಮಾಯಕರಲ್ಲ, ದೇಶವನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸಿ ಪ್ರತಿಭಟಿಸುತ್ತಿದ್ದಾರೆ. ಕೋಲಾರದಲ್ಲಿ ಪೌರತ್ವ ಪರ ಪ್ರತಿಭಟಿಸಲು ಬಿಟ್ಟಿಲ್ಲ, ಕಾಂಗ್ರೆಸ್ ಮಾನಸಿಕತೆಯಲ್ಲಿರುವ ಪೊಲೀಸರು ಇದ್ದಾರೆ, ಇದು ಹಿಂದೂ ರಾಷ್ಟ್ರ, ಹಿಂದೂಗಳಿಗೆ ಅನ್ಯಾಯವಾದರೆ ಸಹಿಸುವುದಿಲ್ಲ.

-ಕಲ್ಲಡ್ಕ ಪ್ರಭಾಕರ್ ಭಟ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X