ಎರಡನೇ ಟ್ವೆಂಟಿ-20: ಭಾರತ ವಿರುದ್ಧ ಶ್ರೀಲಂಕಾ 142/9

ಇಂದೋರ್, ಜ.7: ಶಾರ್ದೂಲ್ ಠಾಕೂರ್ ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ ತಂಡ ಭಾರತ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 142 ರನ್ ಗಳಿಸಿದೆ.
ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಯಾವ ಹಂತದಲ್ಲೂ ದಿಟ್ಟ ಹೋರಾಟವನ್ನು ನೀಡದ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಲಂಕಾದ ಪರವಾಗಿ ಕುಸಾಲ್ ಪರೇರ(34, 28 ಎಸೆತ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರೆ, ಫೆರ್ನಾಂಡೊ(22), ಗುಣತಿಲಕ(20)ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ಪರ ಠಾಕೂರ್(3-23)ಯಶಸ್ವಿ ಬೌಲರ್ ಎನಿಸಿಕೊಂಡರು. ನವದೀಪ್ ಸೈನಿ(2-18) ಹಾಗೂ ಕುಲದೀಪ ಯಾದವ್(2-38)ತಲಾ ಎರಡು ವಿಕೆಟ್ ಪಡೆದರು.
Next Story





