ಮಣಿಪಾಲ: ಮೂವರು ದ್ವಿಚಕ್ರ ವಾಹನ ಕಳವು ಆರೋಪಿಗಳ ಬಂಧನ

ಮಣಿಪಾಲ, ಜ.7: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಜ.6ರಂದು ಬಂಧಿಸಿದ್ದಾರೆ.
80 ಬಡಗುಬೆಟ್ಟು ಗ್ರಾಮದ ನೇತಾಜಿನಗರದ ಶರತ್ ಕುಮಾರ್ (21), ರಾಜೇಂದ್ರ(24), ಅಲೆವೂರು ಗ್ರಾಮದ ಪ್ರಗತಿನಗರದ ಪ್ರತಾಪ್(21) ಬಂಧಿತ ಆರೋಪಿಗಳು. ಇವರಿಂದ ಇತ್ತೀಚೆಗೆ ಪರ್ಕಳ ಮತ್ತು ಮಣಿಪಾಲದಲ್ಲಿ ಕಳವು ಮಾಡಲಾಗಿದ್ದ ಸುಮಾರು 75ಸಾವಿರ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಎಸ್ಪಿ ವಿಷ್ಣುವರ್ದನ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್, ಎಸ್ಸೈ ನಂಬಿಯಾರ್ ಎಎಸ್ಸೈ ಶೈಲೇಶ್ , ಸಿಬ್ಬಂದಿಗಳಾದ ಉಮೇಶ್, ಪ್ರಸನ್ನ, ಅಬ್ದುಲ್ ರಝಾಕ್, ಥಾಮ್ಸನ್, ಸಂತೋಷ್ ತಂಡ ಈ ಕಾರ್ಯಾಚರಣೆ ನಡೆಸಿದೆ
Next Story





