ಪೌರತ್ವ ತಿದ್ದುಪಡಿ ಕಾಯ್ದೆ, ಜೆಎನ್‌ಯು ಹಲ್ಲೆ ವಿರೋಧಿಸಿ ಸಿಎಫ್‌ಐ ಧರಣಿ

ಉಡುಪಿ, ಜ.7: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ಸಿಎಎ ಮತ್ತು ಎನ್‌ಆರ್‌ಸಿ ಕಾಯಿದೆ ವಿರೋಧಿಸಿ ಹಾಗೂ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಮಂಗಳವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಣಿಪಾಲದ ಮಾಹೆ ವಿದ್ಯಾರ್ಥಿ ಪ್ರಾಂಜಲ್, ಯಾವುದೇ ಕಾರಣಕ್ಕೂ ಈ ದೇಶದಲ್ಲಿ ಧರ್ಮಾ ಧಾರಿತವಾಗಿ ವಿಭಜನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಬಳಿಕ ಅವರು ಸ್ವರಚಿತ ಕವಿತೆಯನ್ನು ವಾಚಿಸುವ ಮೂಲಕ ಕೇಂದ್ರ ಸರಕಾರದ ವಿುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಎಫ್‌ಐ ದ.ಕ. ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಜಾತ್ಯತೀತ ರಾಷ್ಟ್ರವಾಗಿರುವ ಭಾರತವನ್ನು ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ. ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಮುಸುಕುಧಾರಿ ಗೂಂಡಗಳಿಗೂ ಪಾಕಿಸ್ತಾನದ ಭಯೋತ್ಪಾದಕ ರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಟೀಕಿಸಿದರು.
ದೇಶದ ಜನರನ್ನು ವಿಭಜಿಸಿ, ಪರಸ್ಪರ ದ್ವೇಷಿಸುವಂತೆ ಮಾಡಿ ಬಹುಸಂಖ್ಯಾ ತರನ್ನು ಓಲೈಕೆ ಮಾಡುವುದೇ ಈ ಕಾಯಿದೆಗಳ ಹಿಂದೆ ಇರುವ ಉದ್ದೇಶ ಆಗಿದೆ. ಎನ್‌ಆರ್‌ಸಿ ಮತ್ತು ಸಿಎಎ ಒಂದಕ್ಕೊಂದು ಸಂಬಂಧ ಇದೆ. ಯಾವುದೇ ಕಾರಣಕ್ಕೂ ಈ ಕಾಯಿದೆಯನ್ನು ಜಾರಿಗೆ ಅವಕಾಶ ನೀುವುದಿಲ್ಲ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಶಫೀಕ್, ಕಾರ್ಯದರ್ಶಿ ನವಾಜ್ ಬ್ರಹ್ಮಾವರ, ಜಿಲ್ಲಾ ಸಮಿತಿ ಸದಸ್ಯ ಮುಹ್ಮಮದ್ ಅನ್ನಾನ್, ವಿದ್ಯಾರ್ಥಿ ಮುಖಂಡರಾದ ಫರಾಝ್, ಝಂಝಂ ಮೊದಲಾದ ವರು ಉಪಸ್ಥಿತರಿದ್ದರು.







