ಸಿನೆಮಾ ತಯಾರಿಕೆ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ, ಜ.7: ಮನರಂಜನೆಗಾಗಿ ಆರಂಭವಾದ ಸಿನೆಮಾ ಇಂದು ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ. ಸಿನೆಮಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಇಲ್ಲಿ ತಮ್ಮಲ್ಲಿರುವ ವಿಶಿಷ್ಟ ಚಿಂತನೆ ಹಾಗೂ ಸೃಜನಶೀಲತೆಯ ಮೂಲಕ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಿನೆಮಾ ಮೂಲಕ ಸಮಾಜಕ್ಕೆ ನೀತಿ ಬೋಧನೆ ಮಾಡುವ ಕೆಲಸ ಆಗಬೇಕು ಎಂದು ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶು ಪಾಲ ಡಾ. ಎಂ.ಜಿ.ವಿಜಯ ಹೇಳಿದ್ದಾರೆ.
ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ಫಿಲ್ಮ್ ಆ್ಯಂಡ್ ವಿಡಿಯೋ ಟೆಕ್ನಾಲಜಿ ವತಿಯಿಂದ ಉಡುಪಿ ರಂಗಭೂಮಿಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ ಸಿನೆಮಾ ತಯಾರಿಕೆ ತರಬೇತಿ ಶಿಬಿರವನ್ನು ಮಂಗಳವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವೇದಿಕೆಯಲ್ಲಿ ಚಲನಚಿತ್ರ ನಿರ್ದೇಶಕ ಪಿ.ಎನ್.ರಾಮಚಂದ್ರ, ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ಫಿಲ್ಮ್ ಆ್ಯಂಡ್ ವಿಡಿಯೋ ಟೆಕ್ನಾಲಜಿಯ ಉಪನ್ಯಾಸಕ ಬ್ರಿಜೇಶ್ ಕುಮಾರ್ ಉಪಸ್ಥಿತರಿದ್ದರು. ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ಫಿಲ್ಮ್ ಆ್ಯಂಡ್ ವಿಡಿಯೋ ಟೆಕ್ನಾಲಜಿಯ ಸಿನೆಮಾ ಉಪನ್ಯಾಸಕ ಎಂ.ಕೆ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಭೂಮಿ ಉಪಾಧ್ಯಕ್ಷ ನಂದಕುಮಾರ್ ಎಂ. ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ವಂದಿಸಿದರು. ಶ್ರೀಪಾದ್ ೆಗಡೆ ಕಾರ್ಯಕ್ರಮ ನಿರೂಪಿಸಿದರು.





