ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ: ಬೊಮ್ಮಾಯಿ

ಮಣಿಪಾಲ, ಜ.7: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರು ಸೇರಿದಂತೆ ಯಾವುದೇ ಸಮುದಾಯಕ್ಕೆ ತೊಂದರೆ ಇಲ್ಲ ಎಂದು ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ನಗರ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಮಂಗಳವಾರ ಆಯೋಜಿಸ ಲಾದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಈ ಕಾಯ್ದೆ ಭಾರತಕ್ಕೆ ಸ್ವಾತಂತ್ರ ದೊರೆತ ಕೂಡಲೇ ಜಾರಿಗೆ ಬರಬೇಕಾ ಗಿತ್ತು. ಆದರೆ ಆಗಿನ ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಅದು ಅನು ಷ್ಠಾನಗೊಂಡಿರಲಿಲ್ಲ. ಇದೀಗ 70 ವರ್ಷಗಳ ಬಳಿಕ ಮೋದಿ ಸರಕಾರ ಆ ಕಾುದೆಯನ್ನು ಜಾರಿಗೆ ತಂದಿದೆ ಎಂದರು.
ವಿರೋಧ ಪಕ್ಷಗಳು ಜನರನ್ನು ತಪ್ಪುದಾರಿಗೆ ಎಳೆದು, ಮನಸ್ಸನ್ನು ಒಡೆದು ಧರ್ಮದ ವಿಷ ಬೀಜ ಬಿತ್ತಿ ತನ್ನ ರಾಜಕೀಯ ಬೆಳೆ ಬೇಯಿಸುವ ಕೆಲಸ ಮಾಡುತ್ತಿವೆ. ಆದುದರಿಂದ ಈ ಕಾಯಿದೆ ಕುರಿತು ಯಾರು ಕೂಡ ಸುಳ್ಳು ಮಾಹಿತಿಗಳಿಗೆ ಕಿವಿಗೊಡಬಾರದು. ಈ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡ ರಾದ ಮಹೇಶ್ ಠಾಕೂರ್, ರಾಘವೇಂದ್ರ ಕಿಣಿ, ಪ್ರಭಾಕರ ಪೂಜಾರಿ, ದಾವೂದ್, ಬಾಲಕೃಷ್ಣ ಶೆಟ್ಟಿ, ಉಪೇಂದ್ರ ನಾಯ್ ಮೊದಲಾದವರು ಉಪಸ್ಥಿತರಿದ್ದರು.







