ಕಳವು ಪ್ರಕರಣ : ಆರೋಪಿ ಸೆರೆ

ಬಂಟ್ವಾಳ, ಜ. 7: ಕೊಯಿಲದಲ್ಲಿ ನಡೆದ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮೂಡಬಿದಿರೆ ತಾಲೂಕಿನ ಪುಚ್ಚಮುಗೇರು ನಿವಾಸಿ ಹರೀಶ್ ಪೂಜಾರಿ (40) ಬಂಧಿತ ಆರೋಪಿ.
ಕೊಯಿಲ ಗ್ರಾಮದಲ್ಲಿ 4 ದಿನಗಳ ಹಿಂದೆ ನಿಲ್ಲಿಸಿದ್ದ ಟಿಪ್ಪರ್ ವಾಹನವೊಂದರಿಂದ ಬ್ಯಾಟರಿ ಕಳ್ಳತನ ನಡೆದಿದ್ದು, ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವು ಪ್ರಕರಣಕ್ಕೆ ಸಂಬಂಧಿಸಿ ಪುಚ್ಚಮುಗೇರು ನಿವಾಸಿ ಹರೀಶ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬ್ಯಾಟರಿ ಕಳವು ಬೆಳಕಿಗೆ ಬಂದಿದೆ. ಅದಲ್ಲದೆ, ಆರೋಪಿಯಿಂದ ಬೈಕ್ ವೊಂದನ್ನು ವಶಪಡಿಸಿಕೊಂಡಿದ್ದು, ಅದೂ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಬಳಿ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿಯು ಇನ್ನು ಬೇರೆ ಕಡೆಗಳಲ್ಲಿ ಬ್ಯಾಟರಿ ಕಳವು ಮಾಡಿದ ಬಗ್ಗೆ ಮಾಹಿತಿಯಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





