ಜೆ.ಎನ್.ಯು.ನಲ್ಲಿ ಗೂಂಡಾ ದಾಳಿಗೆ ನ್ಯಾಷನಲ್ ವುಮೆನ್ಸ್ ಫ್ರಂಟ್ ಖಂಡನೆ
ಬೆಂಗಳೂರು, ಜ.8: ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ಯುನಿವರ್ಸಿಟಿ(ಜೆ.ಎನ್.ಯು.)ನಲ್ಲಿ ನಡೆದ ಗೂಂಡಾ ದಾಳಿಯನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಜೆ.ಎನ್. ಯು ಕ್ಯಾಂಪಸಿನ ಪ್ರತಿಯೊಂದು ಗೇಟಿನಲ್ಲೂ ಹಲವಾರು ಭದ್ರತಾ ಸಿಬ್ಬಂದಿಯಿರುವಾಗ ಗೇಟಿನ ಮೂಲಕ ಹಾದು ಹೋಗುವ ವಾಹನಗಳು ಮತ್ತು ವಿದ್ಯಾರ್ಥಿಗಳ ಮೇಲೆ ಅವರು ನಿಗಾ ಇಡಬೇಕಾದದ್ದು ಅವರ ಕರ್ತವ್ಯ. ಹಾಗಿರುವಾಗ ಶಸ್ತ್ರ ಸಜ್ಜಿತವಾಗಿ ಐವತ್ತು ಮಂದಿಯ ಗೂಂಡಾಗಳು ಒಳನುಗ್ಗುವಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲಿಲ್ಲ ಮಾತ್ರವಲ್ಲದೆ
ಕಾಲೇಜಿನ ಸುತ್ತ ಮುತ್ತಲು ಮಧ್ಯಾಹ್ನವೇ ಕೆಲವು ಯುವಕರು ಸಂಶಯಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು ಪೋಲಿಸರಿಗೆ ಮಾಹಿತಿ ನೀಡಿದ್ದರೂ ಯಾಕಾಗಿ ಪೋಲೀಸರು ಕಾಲೇಜಿಗೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಲಿಲ್ಲ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಹೇಳಿದೆ.
ಗೂಂಡಾ ಪಡೆ ದಾಳಿ ಮಾಡುವ ಸಂದರ್ಭದಲ್ಲಿ ಎಬಿವಿಪಿ ನಂಟು ಹೊಂದಿರುವ ವಿದ್ಯಾರ್ಥಿಗಳ ಕೊಠಡಿಗಳನ್ನು ಹೊರತುಪಡಿಸಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಡಪಂಥೀಯ ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳನ್ನೆ ಟಾರ್ಗೆಟ್ ಮಾಡಿಕೊಂಡು ದ್ವಂಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಜೆಎನ್ ಯು ಅಧ್ಯಕ್ಷೆ ಐಶ್ ಘೋಷ್ ಈ ಗೂಂಡಾಗಳಿಂದ ತೀವ್ರವಾದ ಹಲ್ಲೆಯಾಗಿರುವುದಲ್ಲದೆ ಅವರ ಮೇಲೆಯೇ ಪೋಲೀಸ್ ರು ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ ಈ ಎಲ್ಲಾ ಘಟನೆಗಳ ನೋಡುವಾಗ ಈ ಪ್ರಕರಣವು ಸಂಪೂರ್ಣವಾಗಿ ಸಂಘ ಪರಿವಾರದ ಎಬಿವಿಪಿ ಮತ್ತು ದೆಹಲಿ ಪೋಲಿಸರು ಜಂಟಿಯಾಗಿ ಪೂರ್ವಯೋಜಿತವಾಗಿ ನಡೆಸಿದ ಕ್ರತ್ಯವೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಆರೋಪಿಸಿದೆ.
ಘಟನೆಯಲ್ಲಿ ಅನೇಕ ವಿದ್ಯಾರ್ಥಿನಿಯರ ಮೇಲೂ ಮಾರಣಾಂತಿಕ ಹಲ್ಲೆಯಾಗಿರುವಾಗ ಈ ಪ್ರಕರಣದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ಮೋದಿ ಯಾವ ಮುಖ ಇಟ್ಟುಕೊಂಡು ಬೇಟಿ ಪಡಾವೊ ಬೇಟಿ ಬಚಾವು ಘೋಷಣೆಗಳನ್ನು ಕೂಗುತ್ತಾರೆ. ಆದ್ದರಿಂದ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದು ಘಟನೆಯಲ್ಲಿ ನೇರವಾಗಿ ಭಾಗಿಯಾದ ಎಲ್ಲಾ ತಪ್ಪಿತಸ್ಥರ ಮೇಲೂ ಮತ್ತು ಪರೋಕ್ಷವಾಗಿ ಸಹಕರಿಸಿದ ಪೋಲಿಸ್ ಅಧಿಕಾರಿಗಳ ಮೇಲೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಹೇಳಿಕೆಯಲ್ಲಿ ಆಗ್ರಹಿಸಿದೆ.







