ರಾಷ್ಟ್ರವ್ಯಾಪಿ ಕಾರ್ಮಿಕರ ಬಂದ್‌ಗೆ ಬ್ಯಾಂಕ್ ನೌಕರರ ಬೆಂಬಲ, ಬ್ಯಾಂಕಿಂಗ್ ಸೇವೆ ಬಾಧಿತ

ಹೊಸದಿಲ್ಲಿ, ಜ.8: ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಬ್ಯಾಂಕ್ ಉದ್ಯೋಗಿಗಳು ಬೆಂಬಲ ನೀಡಿದ್ದ ಪರಿಣಾಮ ಬ್ಯಾಂಕಿಂಗ್ ಸೇವೆ ಮೇಲೆ ಭಾರೀ ಪರಿಣಾಮಬೀರಿದೆ.
ಬ್ಯಾಂಕ್ ನೌಕರರು ಕೆಲಸ ನಿರ್ವಹಿಸದೇ ಬಂದ್‌ನಲ್ಲಿ ಭಾಗವಹಿಸಿದರು. ಹೀಗಾಗಿ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್ ಶಾಖೆಗಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳು ಸ್ಥಗಿತಗೊಂಡಿದ್ದವು. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಸ್ಥೆ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಸ್ಥೆ, ಬಿಇಎಫ್‌ಐ, ಬ್ಯಾಂಕ್ ಕರ್ಮಚಾರಿ ಸೇನಾ ಮಹಾಸಭಾ ಇಂದು ಬಂದ್‌ಗೆ ಕರೆ ನೀಡಿದ್ದ ಕಾರಣ ಬ್ಯಾಂಕ್ ಉದ್ಯೋಗಿಗಳು ಮೊದಲೇ ಗ್ರಾಹಕರಿಗೆ ಬಂದ್ ಬಗ್ಗೆ ಮಾಹಿತಿ ನೀಡಿದ್ದರು. ಕೆಲವು ಬ್ಯಾಂಕ್‌ಗಳಲ್ಲಿ ಬಂದ್ ಇರುವ ಬಗ್ಗೆ ನೊಟೀಸ್‌ನ್ನು ಹಾಕಲಾಗಿತ್ತು.
Next Story





