ಮುಝಫ್ಫರ್ ಪುರ್ ಆಶ್ರಯಧಾಮದಲ್ಲಿ ಮಕ್ಕಳ ಸಾವಿಗೆ ಪುರಾವೆಯಿಲ್ಲ: ಸುಪ್ರೀಂಗೆ ಸಿಬಿಐ

ಹೊಸದಿಲ್ಲಿ, ಜ.8: ಮುಝಫ್ಫರ್ ಪುರ್ ಆಶ್ರಯಧಾಮದಲ್ಲಿ ಮಕ್ಕಳು ಮೃತಪಟ್ಟಿರುವುದಕ್ಕೆ ಯಾವುದೇ ಪುರಾವೆಗಳು ಲಭಿಸಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಬುಧವಾರ ಸಿಬಿಐ ತಿಳಿಸಿದೆ.
ಎರಡು ಅಸ್ಥಿಪಂಜರವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಮಹಿಳೆ ಹಾಗೂ ಪುರುಷನೊಬ್ಬ ಅಸ್ಥಿಪಂಜರ ಎಂದು ವಿಧಿ ವಿಜ್ಞಾನ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಸಿಬಿಐ ಸಲ್ಲಿಸಿರುವ ಸ್ಥಿತಿಗತಿ ವರದಿಯನ್ನು ಸ್ವೀಕರಿಸಿದೆ. ಇಬ್ಬರು ಅಧಿಕಾರಿಗಳನ್ನು ತನಿಖಾ ತಂಡದಿಂದ ಬಿಡುಗಡೆಯಾಗಲು ಅನುಮತಿ ನೀಡಿದೆ.
ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕುರಿತು ತನಿಖೆ ನಡೆಸಲಾಗಿದ್ದು, ಸಂಬಂಧಿತ ನ್ಯಾಯಾಲಯಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಹತ್ಯೆಯಾಗಿದೆ ಎನ್ನಲಾಗಿದ್ದ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಅವರೆಲ್ಲರೂ ಬದುಕಿದ್ದಾರೆ ಎಂದು ಸಿಬಿಐ ಪರ ವಕೀಲ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
Next Story





