ಮೊಂಟೆಪದವು: ಎನ್‌ಆರ್‌ಸಿ, ಸಿಎಎ ವಿರುದ್ಧ ಜಾಗೃತಿ ಕಾರ್ಯಕ್ರಮ

ಮಂಗಳೂರು, ಜ.8: ಎನ್.ಆರ್.ಸಿ., ಸಿಎಎ, ಎನ್.ಪಿ.ಆರ್. ವಿರುದ್ಧ ಫ್ರೆಂಡ್ಸ್ ಮೊಂಟೆಪದವು ನೇತೃತ್ವದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇಂದು ನಡೆಯಿತು.
ಈ ಪ್ರಯುಕ್ತ ಮೊಂಟೆಪದವಿನಲ್ಲಿ ಇರುವ ಮನೆಗಳಿಗೆ ತೆರಳಿದ ಫ್ರೆಂಡ್ಸ್ ಮೊಂಟೆಪದವು ಪದಾಧಿಕಾರಿಗಳು ಎನ್.ಆರ್.ಸಿ., ಸಿಎಎ, ಎನ್.ಪಿ.ಆರ್. ಪೋಸ್ಟರ್ ಅಭಿಯಾನ ನಡೆಸುತ್ತಿದ್ದಾರೆ.
ಮೊಂಟೆಪದವು ಮಸೀದಿಯ ಎದುರುಗಡೆ ಫ್ರೆಂಡ್ಸ್ ಮೊಂಟೆಪದವಿನ ಪದಾಧಿಕಾರಿಗಳು ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು








