ಮತದಾರರ ಮಿಂಚಿನ ನೋಂದಣಿ: ಅವಧಿ ವಿಸ್ತರಣೆ
ಮಂಗಳೂರು, ಜ.8: ದ.ಕ. ಜಿಲ್ಲಾದ್ಯಂತ ಮಿಂಚಿನ ನೋಂದಣಿ ಆಂದೋಲನ ಆರಂಭಗೊಂಡಿದ್ದು, ಕಾರ್ಯಕ್ರಮವು ಜ.10ರವರೆಗೆ ವಿಸ್ತರಣೆಗೊಂಡಿದೆ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜ.15ರಂದು ಕೊನೆಯ ದಿನವಾಗಿದೆ. ವಿಕಲಚೇತರನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನೂಕೂಲಕ್ಕಾಗಿ ವಿಸ್ತರಣೆಗೊಳಿಸಲಾಗಿದೆ.
ನೋಂದಣಿ ಅಭಿಯಾನವು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಡೆಯಲಿದೆ. ಸಾರ್ವಜನಿ ಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
Next Story





