ಇಸ್ರೇಲ್ ಮೇಲೆ ದಾಳಿ ಮಾಡಿದಲ್ಲಿ ಬಲವಾದ ಏಟು ನೀಡಲಿದ್ದೇವೆ: ನೆತನ್ಯಾಹು

file photo
ಜೆರುಸಲೇಂ,ಜ.8: ಅಮೆರಿಕ ಸೇನಾಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ನ ಉನ್ನತ ಸೇನಾ ಜನರಲ್ ಖಾಸಿಂ ಸುಲೈಮಾನಿ ಸಾವನ್ನಪ್ಪಿದ ಘಟನೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನಪರಿಸ್ಥಿತಿ ಭುಗಿಲೆದ್ದಿರುವಂತೆಯೇ, ಒಂದು ವೇಳೆ ತನ್ನ ಮೇಲೆ ಇರಾನ್ ದಾಳಿ ನಡೆಸಿದಲ್ಲಿ ಅದಕ್ಕೆ, ‘‘ಬಲವಾದ ಪ್ರಹಾರ’’ವನ್ನು ತಾನು ನೀಡುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ.
‘‘ನಮ್ಮ ಮೇಲೆ ದಾಳಿ ನಡೆಸುವವರು ಯಾರೆ ಆಗಿರಲಿ ಅವರಿಗೆ ಬಲವಾದ ಪ್ರಹಾರವನ್ನೇ ನೀಡಲಾಗುವುದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜೆರುಸಲೇಂನಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಇರಾಕ್ನಲ್ಲಿ ಅಮೆರಿಕದ ಪಡೆಗಳು ಬಳಸಿಕೊಳ್ಳುತ್ತಿರುವ ಸೇನಾನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ ಕಳೆದ ವಾರ ಅಮೆರಿಕವು ಡ್ರೋನ್ ದಾಳಿಯಲ್ಲಿ ಮೃತಪಟ್ಟ ಇರಾನ್ನ ಸೇನಾ ಜನರಲ್ ಖಾಸಿಂ ಸುಲೈಮಾನಿ ಓರ್ವ ಭಯೋತ್ಪಾದಕರ ವರಿಷ್ಠನೆಂದು ನೆತನ್ಯಾಹು ಹೇಳಿದ್ದಾರೆ.
ಮಧ್ಯಪ್ರಾಚ್ಯ ಹಾಗೂ ಜಗತ್ತಿನಾದ್ಯಂತ ಇರಾನ್ ನಡೆಸುತ್ತಿರುವ ಭಯೋತ್ಪಾದನೆಯ ಅಭಿಯಾನದ ರೂವಾರಿ ಖಾಸಿಂ ಆಗಿದ್ದನೆಂದು ಅದು ಹೇಳಿದೆ.





