ಝಿಂಬಾಬ್ವೆ ಟೆಸ್ಟ್ ತಂಡದ ನಾಯಕರಾಗಿ ವಿಲಿಯಮ್ಸ್
ಹರಾರೆ, ಜ.8: ಝಿಂಬಾಬ್ವೆ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಸಿಯಾನ್ ವಿಲಿಯಮ್ಸ್ ಆಯ್ಕೆಯಾಗಿದ್ದಾರೆ. ಚಾಮು ಚಿಬಾಭಾ ಏಕದಿನ ಮತ್ತು ಟ್ವೆಂಟಿ-20 ತಂಡದ ಹಂಗಾಮಿ ನಾಯಕರಾಗಿರುತ್ತಾರೆ.
ಝಿಂಬಾಬ್ವೆ ಕ್ರಿಕೆಟ್ ತಂಡದ ನಿರ್ದೇಶಕ ಹಾಗೂ ಮಾಜಿ ನಾಯಕ ಹ್ಯಾಮಿಲ್ಟನ್ ಮಸಕಝ ಅವರ ಶಿಫಾರಸಿನಂತೆ ತಂಡಗಳಿಗೆ ನಾಯಕರನ್ನು ನೇಮಕ ಮಾಡಲಾಗಿದೆ ಎಂದು ಝಿಂಬಾಬ್ವೆ ಕ್ರಿಕೆಟ್ ಮಂಡಳಿ ತಿಳಿಸಿದೆ. ವಿಲಿಯಮ್ಸ್ 179 ಮತ್ತು ಚಿಬಾಭಾ 139 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಚಿಬಾಭಾ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಅಕ್ಟೋಬರ್ 2018ರಲ್ಲಿ ದ.ಆಫ್ರಿಕಾ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದರು. ಮಸಕಝ ಕಳೆದ ಸೆಪ್ಟಂಬರ್‌ನಲ್ಲಿ ನಿವೃತ್ತರಾಗಿದ್ದರು. ಬಳಿಕ ಅವರು ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದರು.
Next Story





