ಟ್ವೆಂಟಿ-20 ಕ್ರಿಕೆಟ್: ಮೂರನೇ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ರಶೀದ್ ಖಾನ್
ಅಡಿಲೇಡ್, ಜ.8: ಅಡಿಲೇಡ್ ಸ್ಟ್ರೈಕರ್ಸ್ ಆಲ್ರೌಂಡರ್ ರಶೀದ್ ಖಾನ್ ಬುಧವಾರ ಚುಟುಕು ಮಾದರಿ ಕ್ರಿಕೆಟ್ನಲ್ಲಿ ಮೂರನೇ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು. ಈಗ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ನಲ್ಲಿ(ಬಿಬಿಎಲ್) ಸಿಡ್ನಿ ಸಿಕ್ಸರ್ ವಿರುದ್ಧ ಈ ಮೈಲುಗಲ್ಲು ತಲುಪಿದ್ದಾರೆ. ಜೇಮ್ಸ್ ವಿನ್ಸಿ, ಜಾಕ್ ಎಡ್ವರ್ಡ್ಸ್ ಹಾಗೂ ಜೋರ್ಡನ್ ಸಿಲ್ಕ್ರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದ ರಶೀದ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಸಿಕ್ಸರ್ ತಂಡ ಈ ಪಂದ್ಯವನ್ನು 2 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿತು
Next Story