ಉಡುಪಿ, ಜ.9: ‘ಮೊಗವೀರ ಮಹಿಳೆಯರ ರಾಜಕೀಯ ಸಬಲೀಕರಣ- ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ’ ಎಂಬ ವಿಷಯದ ಮೇಲೆ ಕೊಡವೂರಿನ ಹರಿಣಾಕ್ಷಿ ಅವರು ಸಲ್ಲಿಸಿದ್ದ ಪ್ರೌಢ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪಿಹೆಚ್‌ಡಿ ಪದವಿಯನ್ನು ನೀಡಿದೆ ಎಂದು ಕನ್ನಡ ಹಂಪಿ ವಿಶ್ವವಿದ್ಯಾಲಯದ ಕುಲಸಚಿವರ ಪ್ರಕಟಣೆ ತಿಳಿಸಿದೆ.