ಬೈಕಂಪಾಡಿ: ಉದ್ಯಮಿ ಬಿ.ಎ. ಮೊಹಿದಿನ್ ನಿಧನ
ಮಂಗಳೂರು, ಜ. 9: ಹೆಸರಾಂತ ಉದ್ಯಮಿ, ಬೈಕಂಪಾಡಿಯ ಬಿ.ಎ. ಮೊಹಿದಿನ್ (75) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಬಿ.ಎ. ಮೊಹಿದಿನ್ ಅವರು ಕಲಬುರ್ಗಿಯಲ್ಲಿ 50 ವರ್ಷಗಳ ಕಾಲ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಕಲಬುರ್ಗಿಯಲ್ಲಿ ದ.ಕ. ಜಿಲ್ಲೆಯ ನಿವಾಸಿಗಳ ಸಂಘವಾದ ‘ದ.ಕ. ಜಿಲ್ಲಾ ಕಮಿಟಿ’ ಕಾರ್ಯನಿರ್ವಹಿಸುತ್ತಿದು, ಅದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೈಕಂಪಾಡಿ ಮೊಹಿದಿನ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





