ಚೀನಾದ 8 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಕೇವಲ 17 ಬಡವರು!

ಬೀಜಿಂಗ್, ಜ. 9: ಪೂರ್ವ ಚೀನಾದ ಸುಮಾರು 8 ಕೋಟಿ ಜನಸಂಖ್ಯೆಯ ಜಿಯಾಂಗ್ಸು ಪ್ರಾಂತದಲ್ಲಿ ಬಡವರ ಸಂಖ್ಯೆ ಕೇವಲ 17 ಎಂದು ಅಧಿಕೃತ ಸರಕಾರಿ ಅಂಕಿ-ಅಂಶಗಳು ತಿಳಿಸಿವೆ!ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ಹೆಚ್ಚಿನವರು ಈ ಅಂಕಿ-ಅಂಶವನ್ನು ಅಪಹಾಸ್ಯಗೈದಿದ್ದಾರೆ ಹಾಗೂ ಅಧಿಕೃತ ಅಂಕಿ-ಅಂಶಗಳ ನೈಜತೆಯನ್ನು ಪ್ರಶ್ನಿಸಿದ್ದಾರೆ.ಜಿಯಾಂಗ್ಸು ಪ್ರಾಂತದ ಬಡತನ ನಿರ್ಮೂಲನ ಅಧಿಕಾರಿಗಳು ಈ ಅಂಕಿ-ಅಂಶವನ್ನು ಉಲ್ಲೇಖಿಸಿದ್ದಾರೆ.ಈ ವಾರದ ಆದಿ ಭಾಗದಲ್ಲಿ ಪ್ರಾಂತೀಯ ವಿಧಾನಸಭೆಯಲ್ಲಿ ನೂತನ ಅಂಕಿ-ಅಂಶಗಳನ್ನು ಘೋಷಿಸಿದ ಅಧಿಕಾರಿಯೊಬ್ಬರು, ಪ್ರಾಂತದಲ್ಲಿದ್ದ 25.4 ಲಕ್ಷ ಬಡವರನ್ನು ಕಡುಬಡತನದಿಂದ ಮೇಲಕ್ಕೆತ್ತಲಾಗಿದೆ ಹಾಗೂ ಈಗ ಕೇವಲ 6 ಕುಟುಂಬಗಳ 17 ಮಂದಿ ಕಡುಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Next Story





