ಕಾರ್ಮಿಕರ ಪಿಎಫ್ ಹಣದಲ್ಲಿ ವಂಚನೆ: ದೂರು
ಕುಂದಾಪುರ, ಜ.9: ತಲ್ಲೂರು ಗ್ರಾಮದ ಕೆ.ಜಯಕರ ಶೆಟ್ಟಿ ಎಂಬವರ ಮಾಲಕತ್ವದ ಸುಪ್ರೀಮ್ ಟೈಲ್ಸ ವರ್ಕ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಪಿಎಫ್ ಹಣವನ್ನು ಪಾವತಿ ಮಾಡದೆ ಕಾರ್ಮಿಕರಿಗೆ ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಕರ ಶೆಟ್ಟಿ 2018ರ ಮೇ ತಿಂಗಳಿಂದ 2019ರ ನವೆಂಬರ್ ತಿಂಗಳವರೆಗೆ ಕಾರ್ಖಾನೆಯ 130 ಜನ ಕಾರ್ಮಿಕರ 18 ತಿಂಗಳ ಒಟ್ಟು 23,25,196ರೂ. ಹಣವನ್ನು ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ ಕಛೇರಿ ರಿಜನಲ್ ಆಫೀಸ್ ಉಡುಪಿ ಇವರ ಖಾತೆಗೆ ಜಮಾ ಮಾಡದೆ ತನ್ನ ಸ್ವಂತ ಲಾಭಕ್ಕೆ ಉಪಯೋಗಿಸಿಕೊಂಡು ಕಾರ್ಮಿಕರಿಗೆ ಮೋಸ ಮಾಡಿರುವು ದಾಗಿ ಉಡುಪಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಕಛೇರಿ ಪ್ರವರ್ತನಾಧಿ ಕಾರಿ ಮಲ್ಲಿಕಾರ್ಜುನ ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.
Next Story





