ಜ.12ಕ್ಕೆ ಕೆಮ್ತೂರು ತುಳು ನಾಟಕ ಪ್ರಶಸ್ತಿ ಪ್ರದಾನ
ಉಡುಪಿ, ಜ.9: ತುಳುಕೂಟ ಉಡುಪಿ ಇದರ ವತಿಯಿಂದ ನಡೆದ 18ನೇ ವರ್ಷದ ಕೆಮ್ತೂರು ತುಳು ನಾಟಕ ಪರ್ಬದ ಪ್ರಶಸ್ತಿ ಪ್ರದಾನ ಸಮಾರಂಭ ಜ.12ರಂದು ಸಂಜೆ 5:30ಕ್ಕೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಬೆಂಗಳೂರು ತುಳುಕೂಟದ ಅಧ್ಯಕ್ಷ ಬಿ.ದಿನೇಶ್ ಹೆಗ್ಡೆ, ಉದ್ಯಮಿ ಪಿ.ಪರುಷೋತ್ತಮ ಶೆಟ್ಟಿ, ಯು.ವಿಶ್ವನಾಥ ಶೆಣೈ ಹಾಗೂ ಸುರತ್ಕಲ್ ನ ಟಿ.ರವೀಂದ್ರ ಪೂಜಾರಿ ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಈ ಬಾರಿಯ ಕೆಮ್ತೂರು ತುಳುನಾಟಕ ಪ್ರಶಸ್ತಿ ವಿಜೇತ, ಮಂಗಳೂರಿನ ಪಾದುವ ರಂಗ ಅಧ್ಯಯನ ಕೇಂದ್ರದ ಅರುಣ್ ಲಾಲ್ ರಚಿಸಿ ನಿರ್ದೇಶಿಸಿದ ‘ಕೆಂಡೋನಿಯನ್ಸ್’ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟದ ಪ್ರಕಟಣೆ ತಿಳಿಸಿದೆ.
Next Story





