ಕೃಷ್ಣಾಪುರ : ಜ. 10ರಂದು ಯುನಿವೆಫ್ ನಿಂದ ಸೀರತ್ ಸಮಾವೇಶ
ಮಂಗಳೂರು : ಯುನಿವೆಫ್ ಕರ್ನಾಟಕ 2019ರ ನ. 22ರಿಂದ 2020ರ ಜ. 24ರವರೆಗೆ "ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಕೃಷ್ಣಾಪುರ ಶಾಖೆ ವತಿಯಿಂದ ಜ. 10ರ ಸಂಜೆ 7 ಗಂಟೆಗೆ ಕೃಷ್ಣಾಪುರದ 7ನೇ ಬ್ಲಾಕ್ ನಲ್ಲಿರುವ ಪ್ಯಾರಡೈಸ್ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರಗಲಿದೆ.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ. ಪ್ಯಾರಡೈಸ್ ಕ್ಲಬ್ ವ್ಯವಸ್ಥಾಪಕ ಉಸ್ಮಾನ್, ಉದ್ಯಮಿ ಉಮರ್ ಪಾಣೆಮಂಗಳೂರು ಹಾಗೂ ಯುನಿವೆಫ್ ಕೃಷ್ಣಾಪುರ ಶಾಖಾ ಸಂಚಾಲಕ ಹುಝೈಫ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





