ಹಠಮಾರಿ ಉಪಕುಲಪತಿಯನ್ನು ವಜಾ ಮಾಡಿ : ಜೆ ಎನ್ ಯು ವಿದ್ಯಾರ್ಥಿಗಳ ಬೇಡಿಕೆ ಬೆಂಬಲಿಸಿದ ಬಿಜೆಪಿ ನಾಯಕ ಜೋಶಿ

ಫೈಲ್ ಚಿತ್ರ
ಹೊಸದಿಲ್ಲಿ,ಜ.9: ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟಿಸುತ್ತಿರುವ ಜೆಎನ್ಯು ವಿದ್ಯಾರ್ಥಿಗಳಿಗೆ ಗುರುವಾರ ಅವರು ನಿರೀಕ್ಷಿಸಿರದ ವ್ಯಕ್ತಿಯಿಂದ ಬೆಂಬಲ ದೊರಕಿದೆ. ಶುಲ್ಕ ಹೆಚ್ಚಳ ವಿವಾದಕ್ಕೆ ನ್ಯಾಯಯುತ ಮತ್ತು ಕಾರ್ಯಸಾಧ್ಯ ಪರಿಹಾರ ಕಂಡುಕೊಳ್ಳದ್ದಕ್ಕಾಗಿ ಜೆಎನ್ಯು ಕುಲಪತಿಯನ್ನು ವಜಾಗೊಳಿಸುವಂತೆ ಹಿರಿಯ ಬಿಜೆಪಿ ನಾಯಕ ಮುರಳಿಮನೋಹರ ಜೋಶಿ ಅವರು ಆಗ್ರಹಿಸಿದ್ದಾರೆ.
‘ ವಿವಾದಕ್ಕೆ ನ್ಯಾಯಯುತ ಮತ್ತು ಕಾರ್ಯಸಾಧ್ಯ ಪರಿಹಾರ ಕಂಡುಕೊಳ್ಳುವಂತೆ ಮಾನವ ಅಭಿವೃದ್ಧಿ ಸಚಿವಾಲಯ ಎರಡು ಬಾರಿ ಕುಲಪತಿಗಳಿಗೆ ಸೂಚಿಸಿತ್ತು ಎನ್ನಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವಂತೆಯೂ ಅವರಿಗೆ ತಿಳಿಸಲಾಗಿತ್ತು. ಆದರೆ ಸರಕಾರದ ಪ್ರಸ್ತಾವವನ್ನು ಜಾರಿಗೊಳಿಸದೆ ಅವರು ಹಟಮಾರಿತನ ತೋರಿಸುತ್ತಿದ್ದಾರೆ. ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ’ಎಂದು ಜೋಶಿ ಟ್ವೀಟಿಸಿದ್ದಾರೆ.
Next Story





