ಫೋರಮ್ ಮಾಲ್‌ನಿಂದ ಬೆಂಗ್ರೆ ಶಾಲೆಗೆ ಕೊಡುಗೆ

ಮಂಗಳೂರು, ಜ.10: ಫೋರಮ್ ಫಿಝಾ ಮಾಲ್ ಹಾಗೂ ಬಾಂಧವ್ಯ ಫ್ರೆಂಡ್ಸ್ ಸಹಯೋಗದಲ್ಲಿ ಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ಶಾಲೆಗೆ ಅಗತ್ಯವಾದ ಪುಸ್ತಕಗಳು ಹಾಗೂ ಗ್ರಂಥಾಲಯಕ್ಕಾಗಿ ಪುಸ್ತಕದ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಫೋರಮ್ ಫಿಝಾ ಮಾಲ್‌ನ ಫಯಾಝ್, ಅರವಿಂದ ಶ್ರೀವಾಸ್ತವ್, ಸುನಿಲ್ ಕೆ.ಎಸ್. ಬಾಂಧವ್ಯ ಫ್ರೆಂಡ್ಸ್‌ನ ಅಲಿ ಮತ್ತಿತರರು ಉಪಸ್ಥಿತರಿದ್ದರು.
Next Story





