ಉಳ್ಳಾಲ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸ್ಟಿಕ್ಕರ್ ಅಭಿಯಾನ

ಉಳ್ಳಾಲ : ಎನ್‍ಆರ್‍ಸಿ, ಸಿಎಎ ಹಾಗೂ ಎನ್‍ಪಿಆರ್ ಏನೆಂದು ನಮಗೆ ತಿಳಿದಿದೆ ಮಾಹಿತಿ ಕೊಡಲು, ದಾಖಲೆ ಪಡೆಯಲು ನಮ್ಮ ಮನಗೆ ದಯವಿಟ್ಟು ಬರಬೇಡಿ" ಎನ್ನುವ ಸ್ಟಿಕ್ಕರ್ ಗಳನ್ನು ಉಳ್ಳಾಲ ಪೇಟೆಯ ಹಲವು ಮನೆಗಳ ಮುಂದೆ ಅಂಟಿಸಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್ ಸಿಗೆ ಭಾರೀ ಪ್ರತಿರೋಧ ವ್ಯಕ್ತಪಡಿಸಿವೆ.
ಉಳ್ಳಾಲ ಪೇಟೆ ಸುತ್ತಮುತ್ತಲ ಪ್ರದೇಶದ ಮನೆಗಳಲ್ಲಿ ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ವಿರೋಧಿಸುವ ಪೋಸ್ಟರ್‍ಗಳನ್ನು ಅಂಟಿಸಲಾಗಿದ್ದು, ಸಂವಿಧಾನ ವಿರೋಧಿ ಕಾಯ್ದೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.











