Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪ್ರತಿಭಟನೆ ನಡುವೆಯೂ ಯಶಸ್ವಿಯಾದ...

ಪ್ರತಿಭಟನೆ ನಡುವೆಯೂ ಯಶಸ್ವಿಯಾದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ

ಅಡ್ಡಿಪಡಿಸಿದ ಸಂಘಪರಿವಾರದ ಕಾರ್ಯಕರ್ತರ ಬಂಧನ

ವಾರ್ತಾಭಾರತಿವಾರ್ತಾಭಾರತಿ10 Jan 2020 10:11 PM IST
share
ಪ್ರತಿಭಟನೆ ನಡುವೆಯೂ ಯಶಸ್ವಿಯಾದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು, ಜ.10: ಬಲಪಂಥೀಯ ಸಂಘಟನೆಗಳ ಪ್ರಬಲ ವಿರೋಧ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳ ಅಸಹಕಾರ, ಹಣಕಾಸಿನ ಸಮಸ್ಯೆಯಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನ ಶುಕ್ರವಾರ ಜಿಲ್ಲೆಯ ಶೃಂಗೇರಿ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದ ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ಹೋರಾಟಗಾರ, ಪರಿಸರ ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಮ್ಮೇಳನ ಉದ್ಘಾಟನೆಗೊಂಡಾಗಿನಿಂದ ಸಂಜೆ ವರೆಗೂ ಪಟ್ಟಣದ ಬಲಪಂಥೀಯ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಮ್ಮೇಳನಕ್ಕೆ ಅಡ್ಡಿಪಡಿಸಿ ಪ್ರತಿಭಟನೆಗಳನ್ನು ಮಾಡಿದರಾದರೂ ಪೊಲೀಸರು ಅವರನ್ನು ಬಂಧಿಸುವ ಮೂಲಕ ಸಮ್ಮೇಳನಕ್ಕೆ ಬಿಗಿ ಭದ್ರತೆ ಒದಗಿಸಿದ್ದರು.

16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಕಸಾಪ ಜಿಲಾಧ್ಯಕ್ಷ ಕುಂದೂರು ಅಶೋಕ್ ನೇತೃತ್ವದ ಕಾರ್ಯಕಾರಿ ಮಂಡಳಿ ಆಯ್ಕೆ ಮಾಡಿದ ಕೆಲ ದಿನಗಳ ನಂತರ ವಿಠಲ್ ಹೆಗ್ಡೆ ನಕ್ಸಲೀಯರ ಬೆಂಬಲಿಗರು ಎಂದು ಆರೋಪಿಸಿ ಸಮ್ಮೇಳನದ ಅಧ್ಯಕ್ಷರನ್ನು ಬದಲಾಯಿಸುವಂತೆ, ಮುಂದೂಡುವಂತೆ ಆಗ್ರಹಿಸಿದ್ದರು. ಅಲ್ಲದೇ ಪಟ್ಟಣ ಬಂದ್ ಮಾಡುವ ಬೆದರಿಕೆಯನ್ನೂ ಹಾಕಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕೂಡ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಮ್ಮೇಳನಕ್ಕೆ ಅನುದಾವನ್ನೂ ತಡೆ ಹಿಡಿದಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಕೂಡ ಸಚಿವ ರವಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದು, ಕೇಂದ್ರ ಕಸಾಪದ ಅನುದಾನವನ್ನೂ ತಡೆ ಹಿಡಿದಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಜನರಿಂದ ಹಣ ಸಂಗ್ರಹಿಸಿ ಸಮ್ಮೇಳನ ನಡೆಸುವುದಾಗಿ ಹೇಳಿ ಸಮ್ಮೇಳನ ಮಾಡಿಯೇ ತೀರುತ್ತೇವೆ, ಸಮ್ಮೇಳನಧ್ಯಕ್ಷರನ್ನು ಬದಲಾಯಿಸುವ, ಸಮ್ಮೇಳನ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿ ನಿಗದಿತ ದಿನಾಂಕದಂದು ಎರಡು ದಿನಗಳ ಕಾಲ ಸಮ್ಮೇಳನ ನಡೆಸಲು ಮುಂದಾಗಿದ್ದರು. ಸಮ್ಮೇಳನಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡದೇ ಸಮ್ಮೇಳನ ಮುಂದೂಡುವಂತೆ ನೀಡಿದ ಸೂಚನೆಗೂ ಕುಂದೂರು ಅಶೋಕ್ ಸೊಪ್ಪು ಹಾಕದೇ ಜ.10ರಂದು ಸಾರ್ವಜನಿಕರ ಆರ್ಥಿಕ ನೆರವಿನಿಂದ ಸಮ್ಮೇಳನ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದರು.

ಶುಕ್ರವಾರ ಬೆಳಗ್ಗೆ ಪೊಲೀಸ್ ಇಲಾಖೆ ಸಮ್ಮೇಳನದ ಮೆರವಣಿಗೆಗೆ ಅವಕಾಶ ನೀಡದ ಕಾರಣಕ್ಕೆ ಕಸಾಪ ಸದಸ್ಯರು ಕೊನೆ ಕ್ಷಣದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ರದ್ದು ಮಾಡಿ ನಿಗದಿಯಾದ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಸಮ್ಮೇಳನಾಧ್ಯಕ್ಷ ವಿಠಲ್ ಹೆಗ್ಡೆ ಸಮ್ಮೇಳನದ ಮಹಾಧ್ವರದ ಬಳಿ ಬರುತ್ತಿದ್ದಂತೆ ನೆರದಿದ್ದ ಸಾವಿರಾರು ಮಂದಿ ಜಯಕಾರ ಕೂಗಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಅವರು ವೇದಿಕೆ ಮುಂಭಾಗದಲ್ಲಿ ಹಾಕಲಾಗಿದ್ದ ಪುಸ್ತಕದ ಮಳಿಗೆಗೆಳನ್ನು ಉದ್ಘಾಟಿಸಿದರು. ಬಳಿಕ ಹೆಗ್ಡೆ ಅವರನ್ನು ವಾದ್ಯಗೋಷ್ಠಿಯೊಂದಿಗೆ ವೇದಿಕೆಗೆ ಕರೆದೊಯ್ಯಲಾಯಿತು.

ಈ ಮಧ್ಯೆ ಜಿಲ್ಲಾ ಪೊಲೀಸ್ ಇಲಾಖೆ ಬಹಿರಂಗ ಸಮ್ಮೇಳನಕ್ಕೆ ಅನುಮತಿ ನೀಡಿಲ್ಲ, ಆದ್ದರಿಂದ ಮೈಕ್ ಬಳಸುವಂತಿಲ್ಲ ಎಂದು ಸೂಚನೆ ನೀಡಿದ್ದರಿಂದ ಮೈಕ್‍ಅನ್ನು ಆಫ್ ಮಾಡಲಾಗಿತ್ತು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕೆಲಕಾಲ ಗೊಂದಲ ಉಂಟಾಯಿತಾದರೂ ಪೊಲೀಸ್ ಇಲಾಖೆಯ ಸೂಚನೆಗೆ ಸೊಪ್ಪು ಹಾಕದ ಕಸಾಪ ಮುಖಂಡರು ಹಾಗೂ ಸ್ಥಳದಲ್ಲಿದ್ದ ಮುಖಂಡರು ಮೈಕ್ ನಿರ್ವಾಹಕನಿಗೆ ಸಂಪರ್ಕ ನೀಡಲು ಒತ್ತಾಯಿಸಿದರು. ಆತ ಮೈಕ್ ಸಂಪರ್ಕ ನೀಡಿದ್ದರಿಂದ ಗೊಂದಲ ತಿಳಿಯಾಗಿ ಸಮ್ಮೇಳನಕ್ಕೆ ಚಾಲನೆ ಸಿಕ್ಕಿತು. ಸಮ್ಮೇಳನದ ಉದ್ಘಾಟಕರಾಗಿದ್ದ ಸಿ.ಟಿ.ರವಿ ಕಾರ್ಯಕ್ರಮಕ್ಕೆ ಬಾರದ ಕಾರಣಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರಿಂದ ಸಮ್ಮೇಳನವನ್ನು ಉದ್ಘಾಟಿಸಿದರು. ಸಮ್ಮೇಳನ ಉದ್ಘಾಟನೆಯಾಗುತ್ತಿದ್ದಂತೆ ಬಲಪಂಥೀಯ ಸಂಘಟನೆಗಳ ಸುಮಾರು 10-12 ಮಂದಿ ಇದ್ದ ಗುಂಪೊಂದು ಸಮ್ಮೇಳನದ ಮಹಾಧ್ವಾರದ ಬಳಿಯ ರಸ್ತೆಯಲ್ಲಿ ಸಮ್ಮೇಳನ ವಿರೋಧಿಸಿ ಧಿಕ್ಕಾರ, ಜೈಶ್ರೀರಾಮ್ ಘೋಷಣೆ ಕೂಗುತ್ತಾ ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಹಾಗೂ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಈ ಗೊಂದಲದ ಮಧ್ಯೆ ಸಮ್ಮೇಳನ ನಿರಾತಂಕವಾಗಿ ಸಾಗಿತು. 

ಈ ಪ್ರತಿಭಟನೆ, ಬಂಧನದ ಘಟನೆ ನಡೆದು ಅರ್ಧ ಗಂಟೆ ಕಳೆಯುವಷ್ಟರಲ್ಲಿ ಬಲಪಂಥೀಯ ಸಂಘಟನೆಗಳ ಮತ್ತೊಂದು ಗುಂಪು ಮತ್ತೆ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲೇ ಕೂರಲು ಮುಂದಾದರು. ಈ ವೇಳೆ ಪೊಲೀಸರು ವಾಹನ ಸಂಚಾರಕ್ಕೆ ಅಡ್ಡಿಯಾಗುವ ಕಾರಣಕ್ಕೆ ಬಂಧಿಸಲು ಮುಂದಾದರು. ಆಗ ಪ್ರತಿಭಟನಾಕಾರರರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಬಂದ್‍ಗೂ ಅವಕಾಶ ನೀಡಿಲ್ಲ, ಸಮ್ಮೇಳನಕ್ಕೂ ಅವಕಾಶ ನೀಡಿಲ್ಲ ಎಂದು ಎಸ್ಪಿ ಹೇಳಿಕೆ ನೀಡಿದ್ದಾರೆ. ಆದರೆ ಸಮ್ಮೇಳನ ನಡೆಯಲು ಅವಕಾಶ ನೀಡಿರುವುದು ಏಕೆಂದು ಪ್ರಶ್ನಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಎಸ್ಪಿ ಹರೀಶ್ ಪಾಂಡೆ, ಎಎಸ್ಪಿ ಶೃತಿ ಧರಣಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಈ ವೇಳೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದಲ್ಲಿ ಬಂಧಿಸುವುದಾಗಿ ಹೇಳಿದ್ದರಿಂದ 8-10 ಮಂದಿ ಇದ್ದ ಪ್ರತಿಭಟನಾಕಾರರು ರಸ್ತೆ ಬದಿಯಲ್ಲಿ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಲಾರಂಭಿಸಿದರು. ಈ ವೇಳೆ ಎಸ್ಪಿ, ಡಿಸಿ ಸ್ಥಳದಲ್ಲಿದ್ದರಾದರೂ ಮೌನಕ್ಕೆ ಶರಣಾದರು. ಈ ಗೊಂದಲದ ನಡುವೆಯೂ ಸಮ್ಮೇಳನದಲ್ಲಿ ಯಾವುದೇ ಗೊಂದಲ ಕಂಡು ಬರಲಿಲ್ಲ. 

ಬಳಿಕ ಸಮ್ಮೇಳನಾಧ್ಯಕ್ಷ ವಿಠಲ್ ಹೆಗ್ಡೆ ಅವರು ಭಾಷಣ ಮಾಡಲು ಆರಂಭಿಸಿದಾಗ ರಸ್ತೆ ಬದಿಯಲ್ಲಿದ್ದ ಪ್ರತಿಭಟನಾಕಾರರು ರಸ್ತೆ ಗಿಳಿದು ಮಹಾಧ್ವಾರದ ಬಳಿ ಬಂದು ಧಿಕ್ಕಾರ ಕೂಗಲಾರಂಭಿಸಿದರು. ಈ ವೇಳೆ ಪೊಲೀಸರು ಬಂಧಿಸಿ ವಾಹನದ ಮೂಲಕ ಕರೆದೊಯ್ದರು. ಕೆಲ ಹೊತ್ತಿನ ಬಳಿಕ ಮತ್ತೆ ಕೆಲವರು ಪ್ರತಿಭಟನೆ ಮುಂದಾದಾಗ ಪೊಲೀಸರು ಮತ್ತೆ ಬಂಧಿಸಿ ಕರೆದೊಯ್ದರು. ಹೀಗೆ ಬೆರಳೆಣಿಕೆಯಲ್ಲಿ ಆಗಮಿಸಿ ಗುಂಪು ಗುಂಪಾಗಿ ಮಾಡಿದ ಪ್ರತಿಭಟನೆ ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣ ಮುಗಿಯುವವರೆಗೂ ನಡೆಯಿತು. ಇದು ಮಧ್ಯಾಹ್ನದ ಮೊದಲ ಗೋಷ್ಠಿವರೆಗೆ ನಡೆದು ನಂತರ ತಣ್ಣಗಾಯಿತು. 

ಪ್ರತಿಭಟನೆ ವೇಳೆ ರಸ್ತೆ ಮೇಲೆ ಕೂತು ಧಿಕ್ಕಾರ ಕೂಗಿದವರು ಮಹಾಧ್ವಾರದ ಒಳಗೆ ಬರಲಿಲ್ಲ. ಸಮ್ಮೇಳನ ನಡೆಯುತ್ತಿದ್ದ ವೇಳೆ ರಸ್ತೆಯಲ್ಲಿ ಧಿಕ್ಕಾರದ ಘೋಷಣೆ ಕೇಳಿ ಬಂದರೆ, ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಜೈಕಾರದ ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯಗಳೂ ಕೆಲವೊಮ್ಮೆ ಕಂಡು ಬಂತು. ಉದ್ಘಾಟನಾ ಕಾರ್ಯಕ್ರಮದ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರಂತೂ ಸಾಹಿತ್ಯದ ವಿಷಯ ಬಿಟ್ಟು ಪ್ರತಿಭಟನೆ ಮಾಡುತ್ತಿದ್ದವರನ್ನುದ್ದೇಶಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದರು. 

ಒಟ್ಟಾರೆ ರಾಜ್ಯದ ಗಮನ ಸೆಳೆದಿದ್ದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಸರಕಾರದ ಅಸಹಕಾರದ ನಡುವೆ ಸಣ್ಣ ಗೊಂದಲಗಳ ನಡುವೆ ಅದ್ದೂರಿಯಾಗಿ ನಡೆದಿದ್ದು, ಮೊದಲ ದಿನದ ಕಾರ್ಯಕ್ರಮ ಸಮಾಪ್ತಿಯಾಗಿದ್ದು, ಜ.11ರಂದು ಶನಿವಾರ ಸಮ್ಮೇಳನದ ಭಾಗವಾಗಿ ಎರಡು ಘೋಷ್ಠಿಗಳು ನಡೆಯಲಿವೆ.

ಅಘೋಷಿತ ಬಂದ್‍ಗೆ ಕರೆ; ಮಿಶ್ರ ಪ್ರತಿಕ್ರಿಯೆ
ಸಮ್ಮೇಳನವನ್ನು ವಿಠಲ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸುವುದನ್ನು ವಿರೋಧಿಸಿ ಬಲಪಂಥೀಯ ಸಂಘಟನೆಗಳು ಶುಕ್ರವಾರ ಶೃಂಗೇರಿ ಪಟ್ಟಣ ಬಂದ್‍ಗೆ ಕರೆ ನೀಡಿತ್ತು. ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದ ಕಾರಣಕ್ಕೆ ಗುರುವಾರ ಸಂಘಟನೆಗಳ ಸದಸ್ಯರು ಮನೆ ಮನೆ ಭೇಟಿ ನೀಡಿ ಬಂದ್ ಮಾಡುವಂತೆ ಪಟ್ಟಣದಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಶೃಂಗೇರಿ ಪಟ್ಟಣದಲ್ಲಿ ಬೆಳಗ್ಗೆ ಕೆಲ ಅಂಗಡಿಗಳು ಬಂದ್ ಆಗಿದ್ದರೆ, ಕೆಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ವಾಹನ ಸಂಚಾರ, ಪ್ರವಾಸಿಗರ ಸಂಖ್ಯೆ ಪಟ್ಟಣದಲ್ಲಿ ಎಂದಿನಂತಿತ್ತು. ಸಮ್ಮೇಳನ ಆರಂಭವಾಗಿ ಈ ಸಂಘಟನೆಗಳು ಪ್ರತಿಭಟನೆಗೆ ಮುಂದಾದ ಸುದ್ದಿ ತಿಳಿದ ಅಂಗಡಿ ಮುಂಗಟ್ಟುಗಳ ಮಾಲಕರು ಗಲಾಟೆ ಆಗಬಹುದೆಂದು ಶಂಕಿಸಿ ಬಾಗಿಲು ಹಾಕಿದ್ದರು. ಆದರೂ ಕೆಲ ಅಂಗಡಿಗಳು, ಮೆಡಿಕಲ್ ಶಾಪ್‍ಗಳು, ಬಸ್ ನಿಲ್ದಾಣ, ಶಾಲಾ ಕಾಲೇಜುಗಳು ಎಂದಿನಂತಿದ್ದವು. ಹೊಟೇಲ್‍ಗಳು ಬಂದ್ ಅಗಿದ್ದರಿಂದ ದೂರದ ಪ್ರವಾಸಿಗರು ಬೆಳಗಿನ ಉಪಹಾರಕ್ಕೆ ಪರದಾಡಿದರು. ಸಂಜೆ ವೇಳೆ ಎಲ್ಲ ಅಂಗಡಿಗಳು ತೆರೆದುಕೊಂಡಿದ್ದವು. ಪಟ್ಟಣ ಸಹಜ ಸ್ಥಿತಿಯಲ್ಲಿತ್ತು.

ಸಮ್ಮೇನಕ್ಕೆ ಭಾರೀ ವಿರೋಧ, ಬಂದ್‍ಗೆ ಕರೆ ನೀಡಿದ್ದರಿಂದ ಸಮ್ಮೇಳನಕ್ಕೆ ಜನರು ಬರುವುದು ಅನುಮಾನ ಎಂಬ ವಾತಾವರಣ ಶುಕ್ರವಾರ ಬೆಳಗ್ಗೆ ನಿರ್ಮಾಣವಾಗಿತ್ತು. ವೇದಿಕೆ ಮುಂದೆ ಸಾವಿರಾರು ಕುರ್ಚಿಗಳು ಖಾಲಿ ಇದ್ದ ಕಾರಣಕ್ಕೆ ಸಮ್ಮೇಳನ ಆಯೋಜಕರಲ್ಲಿ ಈ ಭಯ ಆವರಿಸಿತ್ತು. ಆದರೆ ಸಮ್ಮೇಳನಕ್ಕೆ ಚಾಲನೆ ಸಿಗುತ್ತಿದ್ದಂತೆ ಜನರು ತಂಡೋಪತಂಡವಾಗಿ ಬರಲಾರಂಭಿಸಿದ್ದರು. ಕೆಲ ಹೊತ್ತಿನಲ್ಲೇ ಇಡೀ ವೇದಿಕೆ ಮುಂಭಾಗ ಜನರಿಂದ ತುಂಬಿ ತುಳುಕಿತು. ಆಯೋಜಕರು ಕುರ್ಚಿಗಳನ್ನು ಮತ್ತೆ ತಂದು ಹಾಕುತ್ತಿದ್ದ ದೃಶ್ಯಗಳು ಈ ವೇಳೆ ಕಂಡು ಬಂತು.

ತಳ್ಳು-ನೂಕಾಟ: ಸಮ್ಮೇಳನ ಆರಂಭವಾದ ಕೂಡಲೆ ಸ್ಥಳಕ್ಕೆ ಬಂದ ಸುಮಾರು 8 ಜನ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಆ ನಂತರ ಶ್ರೀರಾಮಸೇನೆ ಕಾರ್ಯಕರ್ತರು ಸಮುದಾಯ ಭವನದ ಮುಂಭಾಗದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು. ಅವರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಸ್ಥಳಕ್ಕೆ ಬಂದ ಮತ್ತೊಂದು ಗುಂಪು ಪೊಲೀಸರೊಂದಿಗೆ ವಾಗ್ವಾದ ಆರಂಭಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮ್ಮೇಳನವನ್ನು ಮುಂದೂಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ನಾವೂ ಸಹ ಶೃಂಗೇರಿ ಚಲೋ ಕಾರ್ಯಕ್ರಮವನ್ನು ರದ್ದುಪಡಿಸಿದ್ದೇವೆ. ಆದರೆ ಈಗ ಜಿಲ್ಲಾಡಳಿತದ ಸೂಚನೆಯನ್ನು ಮೀರಿ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಅವರಿಗೆ ಸಮ್ಮೇಳನ ನಡೆಸಲು ಅವಕಾಶ ಮಾಡಿಕೊಟ್ಟು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದೀರಿ. ಇದು ಸರಿಯಲ್ಲ. ಸಮ್ಮೇಳನವನ್ನು ಕೂಡಲೆ ನಿಲ್ಲಿಸಿ ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ಆರಂಭಿಸಿದರು.

ಪೊಲೀಸರು ಪ್ರತಿಭಟನೆ ನಡೆಸಬೇಡಿ ಎಂದು ಮನವಿ ಮಾಡಿಕೊಂಡರೂ ಕೇಳಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದು ನೂಕಾಟ-ತಳ್ಳಾಟವೂ ನಡೆಯಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಕೂಡಲೆ ಪ್ರತಿಭಟನಾಕಾರರನ್ನು ಬಲವಂತವಾಗಿ ಬಸ್ಸಿನೊಳಗೆ ತಳ್ಳಿ ಬಂಧಿಸಿ ಕರೆದೊಯ್ದರು. ಆ ನಂತರವೂ ಗುಂಪು-ಗುಂಪಾಗಿ ಬರುತ್ತಿದ್ದ ಹಲವರು ಪ್ರತಿಭಟನೆ ನಡೆಸುತ್ತಿದ್ದರು. ಉದ್ಘಾಟನಾ ಸಮಾರಂಭವು ಪೂರ್ಣಗೊಳ್ಳುವವರೆಗೂ ಇದೇ ರೀತಿ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಮತ್ತೊಂದು ಗುಂಪು ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಸಮ್ಮೇಳನವನ್ನು ನಿಲ್ಲಿಸುವಂತೆ ಆಗ್ರಹಿಸಿದರು.

ಬಿಗಿ ಬಂದೋಬಸ್ತ್: ಸಮ್ಮೇಳನದ ಪರ ಹಾಗೂ ವಿರೋಧವಾಗಿ ಕಳೆದ ಹಲವು ದಿನಗಳಿಂದಲೂ ಹೋರಾಟಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣವನ್ನು ಪ್ರವೇಶಿಸುವ ರಸ್ತೆಗಳಲ್ಲಿ ನಿಂತಿದ್ದ ಪೊಲೀಸರು ಪಟ್ಟಣದೊಳಗೆ ಬರುತ್ತಿದ್ದ ಎಲ್ಲ ವಾಹನಗಳನ್ನು ನಿಲ್ಲಿಸಿ ಎಷ್ಟು ಜನ ಇದ್ದಾರೆ, ಎಲ್ಲಿಂದ ಬರುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿಗಳನ್ನು ಪಡೆಯುತ್ತಿದ್ದರು. ಸಮ್ಮೇಳನ ನಡೆದ ಸಮುದಾಯ ಭವನದ ಪ್ರವೇಶಧ್ವಾರದಲ್ಲಿಯೂ ಪೊಲೀಸರು ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಒಳಗೆ ಬಿಡುತ್ತಿದ್ದರು.

ಸಮ್ಮೇಳನವನ್ನು ಮುಂದೂಡುವಂತೆ ನಿನ್ನೆ ಪೊಲೀಸ್ ಇಲಾಖೆ ಕಸಾಪಕ್ಕೆ ಸೂಚಿಸಿತ್ತು. ಆ ನಂತರ ಸಮ್ಮೇಳನವನ್ನು ಸಮುದಾಯ ಭವನದ ಒಳಗೆ ನಡೆಸಲು ನಿಶ್ಚಯಿಸಲಾಯಿತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ರದ್ದುಪಡಿಸಲಾಯಿತು. ಸಮ್ಮೇಳನಾಧ್ಯಕ್ಷರು ಸಮುದಾಯ ಭವನದ ಆವರಣಕ್ಕೆ ಬಂದ ನಂತರ ಅವರನ್ನು ಹೆಗಲ ಮೇಲೆ ಹೊತ್ತು ವೇದಿಕೆಯವರೆಗೆ ಕರೆದೊಯ್ಯಲಾಯಿತು. ಮೈಕ್ ಬಳಸದಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ ಮೈಕ್ ಇಲ್ಲದೆ ಕಾರ್ಯಕ್ರಮ ನಡೆಸುವುದು ಹೇಗೆಂದು ಕೆಲವರು ಪ್ರಶ್ನಿಸಿದರು.

ಆ ನಂತರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪೊಲೀಸರೊಂದಿಗೆ ಚರ್ಚಿಸಿ ಮೈಕ್ ಬಳಸಲು ಒಪ್ಪಿಗೆ ಪಡೆದುಕೊಂಡರು. ಸಮ್ಮೇಳನದ ಉದ್ಘಾಟನಾ ಸಮಾರಂಭ ಪೂರ್ಣಗೊಂಡು ಗೋಷ್ಠಿಗಳು ಆರಂಭವಾಗುವ ಸಂದರ್ಭದಲ್ಲಿ ಪೊಲೀಸರು ಪುನಃ ಮೈಕ್ ಬಳಸದಂತೆ ಸೂಚಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಶೃತಿ ಅವರೊಂದಿಗೆ ಕೆಲಕಾಲ ಚರ್ಚಿಸಿದರು. ನಾವು ಯಾರಿಗೂ ತೊಂದರೆ ಕೊಡುತ್ತಿಲ್ಲ. ಮೈಕ್ ಇಲ್ಲದೆ ಕಾರ್ಯಕ್ರಮ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕೆಲಕಾಲ ಚರ್ಚಿಸಿದ ನಂತರ ಮೈಕ್ ಬಳಸಲು ಅವಕಾಶ ನೀಡಲಾಯಿತು.

ಸಮ್ಮೇಳನದ ಹಿನ್ನೆಲೆಯಲ್ಲಿ ವಿಠಲ್ ಹಗ್ಡೆ ಅವರ ಮನೆಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪಟ್ಟಣದ ಶಾರದಾ ನಗರದಲ್ಲಿರುವ ಅವರ ಮನೆಗೆ ಗುರುವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ನೀಡಿದ್ದರು. 2 ಕೆಎಸ್ಸಾರ್ಪಿ ತುಕಡಿ ಸೇರಿದಂತೆ 60 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿತ್ತು.

ಸಮ್ಮೇಳನದ ಮಧ್ಯೆ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಮ್ಮೇಳನ ಬೆಂಬಲಿಸಲು ಬಂದಿದ್ದ ದಲಿತಪರ ಸಂಘಟನೆಗಳು ಸಮ್ಮೇಳನ ನಡೆಯುತ್ತಿದ್ದ ವೇಳೆ ತಮಟೆ ಬಾರಿಸಿ ಸಮ್ಮೇಳನಕ್ಕೆ ಬೆಂಬಲ ನೀಡಿದ್ದರು. ಈ ವೇಳೆ ಜಯಕಾರ ಮುಗಿಲುಮುಟ್ಟಿತ್ತು.

ಎಸ್ಪಿ ವಿರುದ್ಧವೇ ಆರೋಪ
ಸಮ್ಮೇಳನಕ್ಕೆ ಮೈಕ್‍ಗೆ ಅನುಮತಿ ಇಲ್ಲ ಎಂದು ಹೇಳಿ ಮೈಕ್‍ಗೆ ಅನುಮತಿ ನೀಡಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆ ಸಮ್ಮೇಳನಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆಂದು ಆರೋಪಿಸಿದ್ದರೆ, ಮತ್ತೊಂದೆಡೆ ಪ್ರತಿಭಟನೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಸರಕಾರಕ್ಕೆ, ಸಿ.ಟಿ ರವಿಗೆ ಪೊಲೀಸ್ ಇಲಾಖೆ ಪರೋಕ್ಷ ಬೆಂಬಲ ನೀಡಿದ್ದಾರೆಂದು ಸಮ್ಮೇಳನದಲ್ಲಿದ್ದ ಕೆಲ ಮುಖಂಡರು ಬಹಿರಂಗವಾಗಿ ವೇದಿಕೆಯಲ್ಲೇ ಆರೋಪಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X