ಕಾರು-ಬೈಕ್ ಅಪಘಾತ: ಇಬ್ಬರು ಗಂಭೀರ

ಮಂಗಳೂರು, ಜ.10: ನಗರದ ಮಂಗಳಾದೇವಿ ಸಮೀಪದ ಶುಕ್ರವಾರ ರಾತ್ರಿ ಕಾರು ಮತ್ತು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅತಿವೇಗವಾಗಿ ಬರುತ್ತಿದ್ದ ಕಾರು ಮಂಗಳಾದೇವಿ ಸಮೀಪದ ಖಾಸಗಿ ಶಾಲೆಯೊಂದರ ಮುಂಭಾಗ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೈಕ್ ಸವಾರ, ಸಹಸವಾರರು ದಂಪತಿ. ಮಂಗಳೂರಿಗೆ ಶಾಪಿಂಗ್ ಮಾಡಲೆಂದು ತೊಕ್ಕೊಟ್ಟುವಿನಿಂದ ಬಂದಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾರು-ಬೈಕ್ ಬಹುತೇಕ ಜಖಂಗೊಂಡಿವೆ. ಅಪಘಾತದ ಬಳಿಕ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಂಗಳೂರು ಪೂರ್ವ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Next Story





