ದಂಪತಿ ಆತ್ಮಹತ್ಯೆ ಯತ್ನ ಪ್ರಕರಣ: ಪತಿ ಸಾವು
ಕುಂದಾಪುರ, ಜ.10: ಚಲಿಸುತಿದ್ದ ಖಾಸಗಿ ಬಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ತಮಿಳುನಾಡು ಮೂಲದ ಕಾರ್ಮಿಕ ದಂಪತಿ ಪೈಕಿ ಪತಿ, ರಾಜ್‌ಕುಮಾರ್ (35) ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ರಾತ್ರಿ 8:50ಕ್ಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆತನ ಪತ್ನಿ ಸಂಗೀತಾ (27) ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ದಂಪತಿಯ ಒಂದೂವರೆ ವರ್ಷದ ಗಂಡು ಮಗು ಮುರುಗನ್ ನನ್ನು ಉಡುಪಿಯ ಬಿ.ಆರ್.ಶೆಟ್ಟಿ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಯ ಅಂಬಲಪಾಡಿ ಬಳಿಯ ಜೋಪಡಿಯಲ್ಲಿ ವಾಸವಾಗಿದ್ದ ಇವರು ಗುರುವಾರ ಕೊಲ್ಲೂರಿನಿಂದ ಮರಳಿ ಬರುತ್ತಿರುವಾಗ ಕುಂದಾಪುರ ದ ಕಟ್‌ಬೆಲ್ತೂರಿನಲ್ಲಿ ಬಸ್ಸಿನಲ್ಲೇ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





