ಸುಳ್ಳು ದಾಖಲೆ ಸೃಷ್ಟಿಸಿ ಭೂಗಳ್ಳತನ: ಆರೋಪ
ಬೆಂಗಳೂರು, ಜ.10: ಉಲ್ಲಾಳ ಗ್ರಾಮದ ಕೆ.ಎಸ್ ವೆಂಕಟೇಶ್ ಬಾಬು ಅವರಿಗೆ ಸೇರಿದ ಜಮೀನನ್ನು ಆರ್.ವಿ ಭಾಸ್ಕರ್ ಎಂಬಾತ ಸುಳ್ಳು ದಾಖಲೆ ಸೃಷ್ಟಿಸಿ ಭೂಗಳ್ಳತನ ಮಾಡಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಜಿ.ಬಿ ಆರೋಪಿಸಿದ್ದಾರೆ.
ಶುಕ್ರವಾರ ಪ್ರೆಸ್‌ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ವಿ ಭಾಸ್ಕರ್ ಎಂಬಾತ ಕೆ.ಎಸ್ ವೆಂಕಟೇಶ್ ಬಾಬು ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಬಾಬು ಅವರಿಗೆ ಸೇರಿದ್ದ 200x220 ಅಳತೆಯ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿದರು.
ಅಲ್ಲದೇ ಇದೇ ರೀತಿ ಆರ್.ವಿ ಭಾಸ್ಕರ್ ಎಂಬಾತ ನೂರಾರು ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ, ಅವರ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾನೆ. ಆದ್ದರಿಂದ ಬೆಂಗಳೂರಿನಲ್ಲಿ ನಿವೇಶನ ಕೊಳ್ಳುವವರು ದಾಖಲೆ ಪರಿಶೀಲಿಸಿ, ಖರೀದಿ ಮಾಡಬೇಕು ಎಂದು ಮನವಿ ಮಾಡಿದರು.
Next Story





