ಮಂಗಳೂರು : ಟಿಡಿಎಫ್ ಮಳಿಗೆಯಲ್ಲಿ ನೆಕ್ಲೇಸ್ - ಕೈಬಳೆಗಳ ಉತ್ಸವ

ಮಂಗಳೂರು, ಜ.11: ವಿವಾಹದ ಸೀಸನ್ ಆರಂಭಗೊಳ್ಳುತ್ತಿದ್ದು, ಮದುವಣಗಿತ್ತಿಯರು ತಾವು ಸುಂದರವಾಗಿ ಕಾಣಿಸಿಕೊಳ್ಳಲು ಅತ್ಯುತ್ತಮ ಚಿನ್ನಾಭರಣದ ವಿನ್ಯಾಸಗಳನ್ನು ಬಯಸುತ್ತಾರೆ. ಇದಕ್ಕಾಗಿ ಚಿನ್ನ ಹಾಗೂ ವಜ್ರಾಭರಣಗಳ ಪ್ರಮುಖ ತಯಾರಕರು ಹಾಗೂ ರಖಂ ಮರಾಟಗಾರರಾಗಿರುವ ಟಿಡಿಎಫ್ ಡೈಮಂಡ್ಸ್ ಮತ್ತು ಗೋಲ್ಡ್ ಸಂಸ್ಥೆಯು ಫಳ್ನೀರ್‌ನಲ್ಲಿರುವ ತನ್ನ ಮಳಿಗೆಯಲ್ಲಿ ಜ. 13ರಿಂದ ಜ. 19ರವರೆಗೆ ನೆಕ್ಲೇಸ್ ಹಾಗೂ ಕೈಬಳಗಳ ಉತ್ಸವವನ್ನು ಆಯೋಜಿಸಿದೆ.
ಮಂಗಳೂರಿನ ಫಳ್ನೀರ್ ಹಾಗೂ ಮುಂಬೈ ಸೇರಿದಂತೆ ದೇಶದಲ್ಲಿ ಒಟ್ಟು ನಾಲ್ಕು ರಿಟೇಲ್ ಮಳಿಗೆಗಳನ್ನು ಹೊಂದಿರುವ ಟಿಡಿಎಫ್ ಡೈಮಂಡ್ಸ್ ಮತ್ತು ಗೋಲ್ಡ್ ಸಂಸ್ಥೆಯು 1999ರಲ್ಲಿ ಆರಂಭಗೊಂಡಿತು. ಸುಂದರ ವಿನ್ಯಾಸಗಳಿಗೆ ಮಾತ್ರವಲ್ಲದೆ, ಪ್ರಮಾಣೀಕೃತ ಹಾಗೂ ಹಾಲ್ಮಾರ್ಕ್ ಮಾಡಲಾದ ಆಭರಣಗಳ ತಯಾರಿಕೆಯಲ್ಲೂ ಸಂಸ್ಥೆ ಹೆಸರುವಾಸಿಯಾಗಿದೆ.
ಬಾಲಿವುಡ್ ನಟರು ನಿಯಮಿತವಾಗಿ ಇಲ್ಲಿ ಆಭರಣಗಳನ್ನು ಖರೀದಿಸುವುದು ವಿಶೇಷ. ಮಂಗಳೂರಿನವರೇ ಆಗಿರುವ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಸಹ ಸಂಸ್ಥಾಪಕರಾದ ಅಡ್ವೆ ಪ್ರಸನ್ನ ಶೆಟ್ಟಿಯವರಿಗೆ ಮಂಗಳೂರಿನ ಮಳಿಗೆ ಬಗ್ಗೆ ವಿಶೇಷ ಒಲವು. ಹಾಗಾಗಿ ಉತ್ತಮ ವಿನ್ಯಾಸಗಳನ್ನು ಮತ್ತು ಉತ್ತಮ ಬೆಲೆಗೆ ಅವುಗಳು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವ ಬದ್ಧತೆ ಅವರದ್ದಾಗಿದೆ.
ಇನ್ನೋರ್ವ ಆಡಳಿತ ನಿರ್ದೇಶಕ ಹಾಗೂ ಸಹ ಸಂಸ್ಥಾಪಕರಾದ ಗೌತಮ್ ಜೈನ್ ಸಿಂಗ್ಘಿ ರಾಜಸ್ತಾನದವರಾಗಿದ್ದು, ಜೈಪುರ ಮತ್ತು ಬಿಕ್ನೇರ್‌ನಲ್ಲಿ ವಿಶೇಷ ಕುಶಲಕರ್ಮಿಗಳಿಂದ ತಯಾರಾದ ಅನ್‌ಕಟ್ ಜದಾವು ಆಭರಣಗಳನ್ನೇ ಖಾತರಿಪಡಿಸುತ್ತಾರೆ. ಮಂಗಳೂರು ಮಳಿಗೆಯಲ್ಲಿ ಇಬ್ಬರು ಸಹಾಯಕ ಪಾಲುದಾರರಾದ ವಿರಾಜ್ ಹೆಗ್ಡೆ ಮತ್ತು ಸುಧಾ ಸಂಪತ್ ಶೆಟ್ಟಿ ನಗರದವರಾಗಿದ್ದು, ಮಳಿಗೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.
ಟಿಡಿಎಫ್ ಡೈಮಂಡ್ಸ್ ಮತ್ತು ಗೋಲ್ಡ್‌ನ ಮಂಗಳೂರಿನ ಮಳಿಗೆಯಲ್ಲಿ ಶನಿವಾರ ನೆಕ್ಲೇಸ್- ಕೈಬಳೆಗಳ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೆನೆಪೊಯ ಗ್ರೂಪ್‌ನ ನಸ್ರೀನ್ ಯೆನೆಪೊಯ ಅಬ್ದುಲ್ಲಾ, ಶ್ರೀದೇವಿ ಕಾಲೇಜಿನ ಮೈನಾ ಸದಾನಂದ ಶೆಟ್ಟಿ, ಸಾನ್ನಿಧ್ಯ ಇಂಡಸ್ಟ್ರೀಸ್‌ನ ಶರ್ಮಿಳಾ ಮೋಹನ್‌ದಾಸ್ ಕಿಲ್ಲೆ, ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪ್ರಿಯಾ ಬಳ್ಳಾಲ್, ಸುಗಮ್ ಪೇಂಟ್ಸ್ ಮತ್ತು ಯುನೈಟೆಡ್ ಪೇಂಟ್ಸ್‌ನ ಭೈರವಿ ವಾಸನಿ ಮತ್ತು ಮನದೀಪ್ ಮಾರ್ಬ್ಸ್ ಸೀಮಾ ಸಿಂಗ್ವಿ ಭಾಗವಹಿಸಿದ್ದರು.
ಈ ವಿಶೇಷ ಉತ್ಸವಕ್ಕಾಗಿ ಮಂಗಳೂರಿನ ಮಳಿಗೆಯಲ್ಲಿ ನೆಕ್ಲೇಸ್‌ಗಳು, ಬಳೆಗಳು ಮತ್ತು ಬ್ರೇಸ್‌ಲೆಟ್‌ಗಳ 1000ಕ್ಕೂ ಅಧಿಕ ವಿನ್ಯಾಸಗಳನ್ನು ಆಯ್ಕೆ ಮಾಡುವ ಖಾತರಿಯನ್ನು ಟಿಡಿಎಫ್ ಖಚಿತಪಡಿಸಿದೆ. ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳಿಗೆ ಫಳ್ನೀರ್‌ನಲ್ಲಿರುವ ಮಂಗಳೂರು ಮಳಿಗೆಯಲ್ಲಿ (ಮಾರ್ಝ್ ಚೇಂಬರ್ಸ್, ಅಥೆನಾ ಆಸ್ಪತ್ರೆ ಎದುರು, ಫಳ್ನೀರ್ ರಸ್ತೆ, ಮಂಗಳೂರು 575001) ಪೂರ್ಣ ಮೌಲ್ಯವನ್ನು ಕೂಡಾ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9972548543ಗೆ ಕರೆ ಮಾಡಬಹುದು.

















