Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಕಲಿ ವಿವೇಕಾನಂದರ ವಿರುದ್ಧ ಅಸಲಿ...

ನಕಲಿ ವಿವೇಕಾನಂದರ ವಿರುದ್ಧ ಅಸಲಿ ವಿವೇಕಾನಂದ

ಇಂದು ವಿವೇಕಾನಂದರ ಜನ್ಮದಿನ

ಅವನೀಂದ್ರಅವನೀಂದ್ರ11 Jan 2020 11:59 PM IST
share
ನಕಲಿ ವಿವೇಕಾನಂದರ ವಿರುದ್ಧ ಅಸಲಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದೇವೆ. ಸಂಘಪರಿವಾರವಂತೂ ವಿವೇಕಾನಂದರ ಜನ್ಮದಿನಾಚರಣೆಯನ್ನು ಗುತ್ತಿಗೆ ತೆಗೆದುಕೊಂಡು ಅವರ ಹೆಸರನ್ನು ತಮ್ಮ ದುರುದ್ದೇಶಕ್ಕೆ ಬಳಸಿಕೊಳ್ಳಲು ಯಶಸ್ವಿಯಾಗಿವೆ. ಭ್ರಷ್ಟಾಚಾರ, ವೌಢ್ಯ ಇತ್ಯಾದಿಗಳಲ್ಲಿ ತೇಲಿ ಹೋಗಿರುವ ಸರಕಾರ, ವಿವೇಕಾನಂದ ವೌಲ್ಯಗಳನ್ನು ಅಳವಡಿಸಿಕೊಳ್ಳಲು ನಾಡಿನ ಜನತೆಗೆ ಕರೆ ನೀಡುತ್ತಿದೆ. ಹಾಗಾದರೆ ಇವರ ವಿವೇಕಾನಂದರು ಯಾರು? ಅವರು ಹುಟ್ಟಿದ್ದೆಲ್ಲಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರಕದೆ ನಾಡಿನ ಜನತೆ ಕಂಗಾಲಾಗಿದ್ದಾರೆ.

ಭಾರತೀಯತೆಗೆ ಮತ್ತು ಹಿಂದುತ್ವಕ್ಕೆ ವಿಶ್ವ ಮಟ್ಟದಲ್ಲಿ ಮಾನ್ಯತೆಯನ್ನು ತಂದುಕೊಟ್ಟವರು ವಿವೇಕಾನಂದರು. ಅವರು ಹಿಂದುತ್ವದ ಹೆಸರಿನಲ್ಲಿ ಆಚರಿಸಲ್ಪಡುವ ಎಲ್ಲ ವೌಢ್ಯಗಳು, ಜಾತೀಯತೆಗಳ ವಿರುದ್ಧ ದಂಗೆಯೆದ್ದ ಸನ್ಯಾಸಿ. ಆದರೆ ಇಂದು ನಡೆಯುತ್ತಿರುವುದೇನು? ಈ ದೇಶವನ್ನು ಒಡೆಯುವುದಕ್ಕಾಗಿ ವಿವೇಕಾನಂದರ ಬಾಯಿಯಲ್ಲಿ ಕೋಮು ವಿಷಕಾರಿ ಹೇಳಿಕೆಗಳನ್ನು ಹೇಳಿಸಲಾಗುತ್ತಿದೆ. ಸಂಘಪರಿವಾರ ಇಂದು ಮತ್ತೆ ಮನು ಸಿದ್ಧಾಂತವನ್ನು, ಜಾತೀಯತೆಯನ್ನು ದೇಶದಲ್ಲಿ ಜಾರಿಗೆ ತರಲು ಹೊಂಚು ಹಾಕುತ್ತಿರುವುದು ಮಾತ್ರವಲ್ಲ, ಅದಕ್ಕಾಗಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿದೆ. ಈ ದೇಶಕ್ಕೆ ಘನತೆಯನ್ನು, ಆತ್ಮಾಭಿಮಾನವನ್ನು ತಂದುಕೊಟ್ಟಂತಹ ವಿವೇಕಾನಂದರನ್ನು ತಮ್ಮ ನೀಚ ಕೆಲಸಗಳಿಗಾಗಿ, ದೇಶವನ್ನು ಒಡೆಯುವ ಕೃತ್ಯಗಳಿಗಾಗಿ ಬಳಸುತ್ತಿರುವುದು ನಿಜಕ್ಕೂ ದುರಂತವಾಗಿದೆ.

ಗೋವು ಮನುಷ್ಯರಿಗಿಂತ ದೊಡ್ಡದು ಎಂದು ಯಾವತ್ತೂ ವಿವೇಕಾನಂದರು ನಂಬಿರಲಿಲ್ಲ. ದೇಶದಲ್ಲಿ ಬರಗಾಲ ತಾಂಡವವಾಡುತ್ತಿದ್ದಾಗ ಬ್ರಾಹ್ಮಣರು ಮತ್ತು ವ್ಯಾಪಾರಿಗಳ ತಂಡವೊಂದು ಅವರನ್ನು ಭೇಟಿಯಾಗಿ ಗೋರಕ್ಷಣೆಗಾಗಿ ಧನಸಹಾಯ ಯಾಚಿಸಿತಂತೆ. ಆದರೆ ವಿವೇಕಾನಂದರು ಅವರಿಗೆ ಛೀಮಾರಿ ಹಾಕಿದರಲ್ಲದೆ ಯಾವ ಧರ್ಮದಲ್ಲಿ ಮನುಷ್ಯರ ಜೀವ ಪ್ರಾಣಿಗಳ ಜೀವಕ್ಕಿಂತ ಬೆಲೆಬಾಳುವುದಿಲ್ಲವೋ, ಅಂತಹ ಧರ್ಮಕ್ಕೆ ನನ್ನ ಧಿಕ್ಕಾರವಿದೆ ಎಂದಿದ್ದರು. ಆದರೆ ಇಂದು ನಡೆಯುತ್ತಿರುವುದು ಅದೇ ಅಲ್ಲವೇ? ಒಂದೆಡೆ ದೇಶ ಅಪೌಷ್ಟಿಕತೆಯಿಂದ ನರಳುತ್ತಿದೆ. ಶೇ. 45ರಷ್ಟು ಅಪೌಷ್ಟಿಕತೆ ದೇಶವನ್ನು ಕಾಡುತ್ತಿರುವುದು ಅವಮಾನ ಎಂದು ಪ್ರಧಾನ ಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರ, ಹಸಿದವರ ಬಾಯಿಯಿಂದ ಪ್ರೊಟೀನ್‌ಯುಕ್ತ ಗೋಮಾಂಸವನ್ನು ಕಸಿಯಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜನರಿಗೆ ನೀಡುವುದಕ್ಕೆ ಮಾತ್ರ ನಮ್ಮಲ್ಲೇನೂ ಇಲ್ಲ.

ಒಂದು ವೇಳೆ ವಿವೇಕಾನಂದರು ಇಂದು ಬದುಕಿದ್ದಿದ್ದರೆ ಅವರು ತಮ್ಮದೇ ಧರ್ಮದ ಮಠಾಧಿಪತಿಗಳ, ಸಂಘಪರಿವಾರದ ವಿರುದ್ಧ ಹೋರಾಟಕ್ಕಿಳಿಯುತ್ತಿದ್ದರೋ ಏನೋ? ಮಡೆಸ್ನಾನವನ್ನು ಸಮರ್ಥಿಸುವಂತಹ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳ ಬಗ್ಗೆ ವಿವೇಕಾನಂದರ ನಿಲುವು ಏನಿರುತ್ತಿತ್ತು ಎನ್ನುವುದನ್ನು ನಾವಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಯುವಕರಲ್ಲಿ, ದೇಶದ ಜನರಲ್ಲಿ ಸ್ವಾಭಿಮಾನವನ್ನು, ಆತ್ಮಾಭಿಮಾನವನ್ನು ಬಿತ್ತುತ್ತಿದ್ದವರು ಸ್ವಾಮಿ ವಿವೇಕಾನಂದರು. ಶಾಸ್ತ್ರ, ಸಂಪ್ರದಾಯದ ಹೆಸರಿನಲ್ಲಿ ಇನ್ನೊಬ್ಬರ ಎಂಜಲ ಮೇಲೆ ಹೊರಳಾಡುವುದನ್ನು ನೋಡಿದರೆ ವಿವೇಕಾನಂದರು ಕೆಂಡವಾಗುತ್ತಿದ್ದರು. ಇದನ್ನು ನಮ್ಮ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು.

ದೇಶ ಬಡತನದಲ್ಲಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಮ್ಮ ಮಠಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕೋಟಿ ಕೋಟಿ ಬೆಲೆಬಾಳುವ ನಗ, ನಗದು ಕೊಳೆಯುತ್ತಾ ಬಿದ್ದಿವೆ. ಬಹುಶಃ ವಿವೇಕಾನಂದರು ಇಂದು ಬದುಕಿದ್ದಿದ್ದರೆ ಯುವಜನರನ್ನು ಒಂದು ಗೂಡಿಸಿ ಇವನ್ನು ಹೊರಗೆ ತರುತ್ತಿದ್ದರು. ದೇಶ ಕಟ್ಟಲು ಬಳಸುತ್ತಿದ್ದರು. ನಮ್ಮ ಸ್ವಾಮೀಜಿಗಳು ಹಿಂದುತ್ವವನ್ನು ಬೋಧಿಸುತ್ತಲೇ, ಕೋಟಿ ಕೋಟಿ ದೋಚುತ್ತಿರುವ ರಾಜಕಾರಣಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ವಿವೇಕಾನಂದರು ಇಂದು ಬದುಕಿದ್ದಿದ್ದರೆ ಏಕಕಾಲದಲ್ಲಿ ಈ ಸ್ವಾಮೀಜಿಗಳ ಮತ್ತು ರಾಜಕಾರಣಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದರು. ಹಿಂದುತ್ವವೆಂದರೆ ಬದುಕುವ ಕ್ರಮ ಎಂದು ವಿವೇಕಾನಂದರು ನಂಬಿದ್ದರು. ಆದರೆ ಬದುಕುವ ಕ್ರಮ ಅಂದರೆ ಏನು? ಬ್ರಾಹ್ಮಣರ ಎಂಜಲಲ್ಲಿ ಕೆಳವರ್ಗದ ಜನರು ಹೊರಳಾಡುವುದೇ? ದಲಿತರು ದೇವಸ್ಥಾನದಿಂದ ಹೊರಗೆ ನಿಲ್ಲುವುದೇ? ರಾಜಕಾರಣಿಗಳ ಭ್ರಷ್ಟಾಚಾರವನ್ನು ಸ್ವಾಮೀಜಿಗಳು ರಕ್ಷಿಸುವುದೇ? ಉಣ್ಣುವುದರಲ್ಲೂ ಪಂಕ್ತಿ ಭೇದ ಮಾಡುವುದೇ? ದಲಿತರನ್ನು ಜೀವಂತವಾಗಿ ಸುಡುವುದೇ? ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿಕಟ್ಟಲು ಪಾಕಿಸ್ತಾನ ಧ್ವಜವನ್ನು ಹಾರಿಸುವುದೇ? ರೈಲುಗಳಿಗೆ ಬಾಂಬಿಟ್ಟು ಅಮಾಯಕರನ್ನು ಕೊಲ್ಲುವುದೇ? ಗೋ ರಕ್ಷಣೆಯ ಹೆಸರಿನಲ್ಲಿ ಬಡವರನ್ನು ಥಳಿಸಿ, ದರೋಡೆ ಮಾಡುವುದೇ? ಗೋವಿಗಾಗಿ ಮನುಷ್ಯರ ಪ್ರಾಣವನ್ನು ತೆಗೆಯುವುದೇ? ಇವೆಲ್ಲವನ್ನು ಬದುಕುವ ಕ್ರಮ ಎಂದು ಯಾರು ತಾನೆ ಒಪ್ಪಿಕೊಂಡಾರು? ಹಿಂದುತ್ವದ ಪುನರುತ್ಥಾನ ಎಂದರೆ ಅದನ್ನು ಮನುಷ್ಯರು ಜೀವಿಸುವ ಧರ್ಮವಾಗಿ ಪರಿವರ್ತಿಸುವುದು ಎಂದು ವಿವೇಕಾನಂದರು ನಂಬಿದ್ದರು. ಆದರೆ ಇಂದು ಸಂಘಪರಿವಾರದವರು ವಿವೇಕಾನಂದರ ಆ ಕನಸನ್ನು ಧ್ವಂಸಗೊಳಿಸುತ್ತಿದ್ದಾರೆ. ವಿವೇಕಾನಂದರ ಭಾವಚಿತ್ರವನ್ನು ಮುಂದಿಟ್ಟುಕೊಂಡೇ ಅವರ ವೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಸಂಘಪರಿವಾರ ಮಾಡುತ್ತಿರುವ ಅನಾಚಾರ, ಅಕ್ರಮಗಳಿಗೆ ಗಾಂಧಿ, ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರು ಪರಿಹಾರ. ನಿಜವಾದ ವಿವೇಕಾನಂದರನ್ನು, ಗಾಂಧಿಯನ್ನು, ಅಂಬೇಡ್ಕರ್‌ರನ್ನು ಯುವಜನರ ಮುಂದಿಡುವುದು ಪ್ರಜ್ಞಾವಂತರ ಕರ್ತವ್ಯ. ಅದುವೇ ಭಾರತ ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ. ವಿವೇಕಾನಂದರ ಜನ್ಮದಿನದ ಈ ಸುಸಂದರ್ಭದಲ್ಲಿ ಆ ಮಹಾನಾಯಕರ ಕನಸುಗಳನ್ನು ನನಸು ಮಾಡಲು ನಾವು ಹೆಜ್ಜೆಗಳನ್ನಿಡಬೇಕಾಗಿದೆ.

share
ಅವನೀಂದ್ರ
ಅವನೀಂದ್ರ
Next Story
X