Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ರಾಯರ ಕುದುರೆ ಕತ್ತೆ ಆಯ್ತು..!!?

ರಾಯರ ಕುದುರೆ ಕತ್ತೆ ಆಯ್ತು..!!?

ಅಜ್ಜಿ ಹೇಳಿದ ಕಥೆ

ವೆಂಕಟೇಶ ಚಾಗಿವೆಂಕಟೇಶ ಚಾಗಿ12 Jan 2020 12:32 PM IST
share
ರಾಯರ ಕುದುರೆ ಕತ್ತೆ ಆಯ್ತು..!!?

ಅನಂತಪುರ ಎಂಬ ಊರಿನಲ್ಲಿ ಅಭ್ಯುದನಾಥ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು. ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಷದಿಂದ ಬದುಕುತ್ತಿದ್ದರೂ ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ಥರಿಗೆ ಕಾಳು-ಕಡಿ ಅಥವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದರು ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅಥವಾ ಹಣವನ್ನು ತಿರುಗಿಸುತ್ತಿದ್ದರು. ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಿದ್ದಾನೆ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು.

ಅದ್ಭುತ ನಾಥನಿಗೆ ಸಾಲವನ್ನು ಮರಳಿ ಕೇಳಲು ಊರಿಂದ ಊರಿಗೆ ಹೋಗಿ ಬರಲು ಒಂದು ಕುದುರೆಯ ಅವಶ್ಯ ಉಂಟಾಯಿತು. ಅವನನ್ನು ರಾಯರೇ ಒಂದು ಉತ್ತಮವಾದ ಕುದುರೆಯನ್ನು ಕೊಂಡುಕೊಳ್ಳಿ ನಿಮಗೆ ಸಹಾಯವಾಗುತ್ತದೆ ಎಂದು ಸಲಹೆಯಿತ್ತರು. ಅದರಂತೆ ಶ್ರೀಮಂತನು ಪಕ್ಕದ ಊರಿಗೆ ಹೋಗಿ ಒಂದು ದಷ್ಟಪುಷ್ಟ ಸುಂದರವಾದ ಕುದುರೆಯನ್ನು ಕೊಂಡು ತಂದನು. ಕುದುರೆಯನ್ನು ತಂದ ಮೊದಲಲ್ಲಿ ಅದನ್ನು ಚೆನ್ನಾಗಿ ನೋಡಿಕೊಳ್ಳ ತೊಡಗಿದನು. ಕಾಲಕ್ಕೆ ತಕ್ಕ ಹಾಗೆ ಅದಕ್ಕೆ ಊಟ, ನಿದ್ದೆ, ಸ್ನಾನ ಹೀಗೆ ಕುದುರೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಂಡರು. ಪಕ್ಕದ ಊರುಗಳಿಗೆ ಹೋಗುವಾಗ ಶ್ರೀಮಂತನೂ ಕುದುರೆಯ ಮೇಲೆ ಹತ್ತಿ ದೂರದ ಊರುಗಳಿಗೆ ಪ್ರಯಾಣ ಮಾಡಿ ಕೆಲಸ ಕಾರ್ಯಗಳನ್ನು ಮುಗಿಸಿದ ನಂತರ ಮನೆಗೆ ಹಿಂದಿರುಗುತ್ತಿದ್ದ. ಕುದುರೆಯು ಅಭ್ಯುದನಾಥನ ಎಲ್ಲಾ ಕಾರ್ಯಗಳಿಗೆ ಸಹಾಯವನ್ನು ನೀಡುತ್ತಾ ಇರುವುದರಿಂದ ಕೆಲಸಕಾರ್ಯಗಳು ಸುಗಮವಾಗಿ ತೊಡಗಿದವು. ಇದರಿಂದಾಗಿ ಇನ್ನೂ ಹೆಚ್ಚು ಹೆಚ್ಚು ಕೆಲಸಗಳನ್ನು ವಹಿಸಿಕೊಂಡನು. ವ್ಯವಹಾರವು ಹೆಚ್ಚಿದಂತೆ ಅಭ್ಯುದನಾಥನ ಬಳಿ ಹಣವೂ ಹೆಚ್ಚತೊಡಗಿತು. ಹಣದ ಮೋಹ ಹೆಚ್ಚಿತು. ಇದರಿಂದಾಗಿ ಕುದುರೆಗೆ ಕೆಲಸಗಳು ಹೆಚ್ಚಿದವು. ವಿಶ್ರಾಂತಿ ಇಲ್ಲದೇ ಕುದುರೆಯು ಪ್ರತಿದಿನ ಪ್ರಯಾಣ ಕೈಗೊಳ್ಳಬೇಕಾಯಿತು. ಅಭ್ಯುದನಾಥನು ಕುದುರೆಯನ್ನು ಮೊದಲಿನಂತೆ ನೋಡಿಕೊಳ್ಳದೇ ಅಪೂರ್ಣ ಆಹಾರ, ಅವಿಶ್ರಾಂತ ಕೆಲಸ, ಅನಾರೋಗ್ಯದಲ್ಲೂ ಕೆಲಸಕ್ಕೆ ತೊಡಗಿಸುವುದು, ಸರಿಯಾದ ಉಪಚಾರ ಮಾಡದಿರುವುದೇ ಇರುವುದರಿಂದ ಕುದುರೆಯು ಮೊದಲಿನ ಹಾಗೆ ಕೆಲಸದಲ್ಲಿ ಶ್ರದ್ಧೆ ಆಸಕ್ತಿಯನ್ನು ತೋರಿಸಲಿಲ್ಲ.

ಅಭ್ಯುದನಾಥನು ಕುದುರೆಯು ಮೊದಲಿನ ಹಾಗೆ ಕೆಲಸದಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲವೆಂದು ಮೂದಲಿಸುತ್ತಾ ಕುದುರೆಗೆ ಸರಿಯಾಗಿ ಆಹಾರ ನೀಡದೇ ಥಳಿಸುತ್ತಿದ್ದನು. ಎಲ್ಲರೂ ರಾಯರ ಕುದುರೆ ಕತ್ತೆ ತರ ಆಗಿದೆ ಎಂದು ಮಾತನಾಡಿಕೊಳ್ಳತೊಡಗಿದರು. ಅಭ್ಯುದನಾಥನಿಗೆ ಕುದುರೆಯ ಬಗ್ಗೆ ಚಿಂತೆಮಾಡತೊಡಗಿದನು.

ಒಂದು ದಿನ ಅಭ್ಯುದನಾಥನ ಮನೆಗೆ ಸನ್ಯಾಸಿಯೊಬ್ಬರು ಆಗಮಿಸಿದರು. ಅಭ್ಯುದನಾಥನ ಕ್ಷೇಮ ಸಮಾಚಾರ ವಿಚಾರಿಸುತ್ತಾ ಇರುವಾಗ ಅಭ್ಯುದನಾಥನು ತನ್ನ ಕುದುರೆಯ ಬಗ್ಗೆ ಹೇಳಿಕೊಂಡನು. ಸನ್ಯಾಸಿಯು ಕುದುರೆಯ ಪೂರ್ವಾಪರ ಹಾಗೂ ಅದರ ಕೆಲಸ ಕಾರ್ಯದ ಬಗ್ಗೆ ತಿಳಿದು ಒಂದು ಸಲಹೆ ನೀಡಿದರು. ಪ್ರತಿ ದಿನವೂ ಕುದುರೆಗೆ ಮೊದಲಿನ ಹಾಗೆ ಆಹಾರ, ವಿಶ್ರಾಂತಿ, ಉಪಚಾರ ಹಾಗೂ ಕೆಲಸವನ್ನು ನೀಡಲು ತಿಳಿಸಿದರು. ಅಭ್ಯುದನಾಥನು ಸನ್ಯಾಸಿಗಳ ಮಾತಿನಂತೆ ಕುದುರೆಯನ್ನು ನೋಡಿಕೊಳ್ಳತೊಡಗಿದನು. ಕುದುರೆಯು ದಿನಗಳು ಉರುಳಿದಂತೆ ಮೊದಲಿನ ಹಾಗೆ ಕೆಲಸದಲ್ಲಿ ಆಸಕ್ತಿ ತೋರಿಸತೊಡಗಿತು. ರಾಯರ ಕುದುರೆ ಕತ್ತೆಯಾಯ್ತು ಎನ್ನುತ್ತಿದ್ದ ಜನ ಕುದುರೆಯ ಈಗಿನ ಕೆಲಸ ಕಾರ್ಯಗಳನ್ನು ಕಂಡು ಮೂಕವಿಸ್ಮಿತರಾದರು.

share
ವೆಂಕಟೇಶ ಚಾಗಿ
ವೆಂಕಟೇಶ ಚಾಗಿ
Next Story
X