ಸರಕಾರಿ ಗೌರವಗಳೊಂದಿಗೆ ಚಿದಾನಂದಮೂರ್ತಿ ಅಂತ್ಯಸಂಸ್ಕಾರ

ಬೆಂಗಳೂರು, ಜ.12: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಬೆಳಗ್ಗೆ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಸರಳವಾಗಿ ನೆರವೇರಿಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸೋಮಣ್ಣ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು, ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರು ಚಿತಾಗಾರದ ಆವರಣದಲ್ಲಿ ಡಾ.ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ದರ್ಶನ ಪಡೆದರು.
ವಿಧಿವಿಧಾನಗಳು ಬೇಡ: ಯಾವುದೇ ಪೂಜಾ ವಿಧಿ ವಿಧಾನಗಳನ್ನು ಮಾಡುವುದು ಬೇಡ, ಸರಳವಾಗಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸುವಂತೆ ಚಿದಾನಂದ ಮೂರ್ತಿ ಅವರು ಕುಟುಂಬದ ಸದಸ್ಯರಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಚಿದಾನಂದಮೂರ್ತಿ ಅವರ ಅಪೇಕ್ಷೆಯಂತೆ ಯಾವುದೇ ಪೂಜೆ ಪುರಸ್ಕಾರ, ನಡೆಸದೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಲಾಯಿತು. ಪೊಲೀಸರು ಮೂರು ಸುತ್ತ ಕುಶಾಲ ತೋಪು ಹಾರಿಸುವ ಮೂಲಕ ಸರಕಾರಿ ಗೌರವ ವಂದನೆ ಸಲ್ಲಿಸಿದರು.
Next Story









